ಕರ್ನಾಟಕ

karnataka

ETV Bharat / state

ಜೆಡಿಎಸ್ ಚಿಹ್ನೆ, ಲೆಟರ್​ಹೆಡ್​ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್​ನಿಂದ ನಿರ್ಬಂಧ - undefined

ಜೆಡಿಎಸ್ ಪಕ್ಷದ ಚಿಹ್ನೆ ಮತ್ತು ಲೆಟರ್​ಹೆಡ್ ಬಳಸದಂತೆ ಸಿಎಂ ಇಬ್ರಾಹಿಂಗೆ ಕೋರ್ಟ್ ನಿರ್ಬಂಧಕಾಜ್ಞೆ ವಿಧಿಸಿದೆ.

Etv Bharat
Etv Bharat

By ETV Bharat Karnataka Team

Published : Jan 20, 2024, 9:50 PM IST

ಬೆಂಗಳೂರು:ಜೆಡಿಎಸ್ ಪಕ್ಷದ ಲಾಂಛನ, ಚಿಹ್ನೆ ಹಾಗೂ ಲೆಟರ್ ಹೆಡ್ ಬಳಸದಂತೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂಗೆ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ವಿಧಿಸಿದೆ. ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ, ಜೆಡಿಎಸ್‍ನಿಂದ ಉಚ್ಛಾಟನೆಯಾದರೂ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ಚಿನ್ನೆ ಬಳಸುತ್ತಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

ಇದೀಗ ಯಾವುದೇ ಪಕ್ಷದ ಚಿಹ್ನೆ ಬಳಸುವಂತಿಲ್ಲ. ಜೆಡಿಎಸ್ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಹಾಗೂ ಪಕ್ಷದ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಪದಾಧಿಕಾರಿಗಳನ್ನೂ ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ಅಪ್ರಾಪ್ತ ಮಕ್ಕಳ ಪೋಷಣೆಯಲ್ಲಿ ತಂದೆಯ ಪಾತ್ರ ನಿರ್ಲಕ್ಷಿಸಲಾಗದು: ಹೈಕೋರ್ಟ್

ABOUT THE AUTHOR

...view details