ಕರ್ನಾಟಕ

karnataka

ETV Bharat / state

ಹುಕ್ಕಾ ಬಾರ್​ಗಳ ಮೇಲೆ ಬೆಳಗಾವಿ ಪೊಲೀಸರ ದಾಳಿ: 4.50 ಲಕ್ಷ ರೂ. ಮೌಲ್ಯದ ಹುಕ್ಕಾ ಜಪ್ತಿ, ಇಬ್ಬರ ಬಂಧನ - Belagavi police raid on hookah bar

ಬೆಳಗಾವಿ ಪೊಲೀಸರು ಹುಕ್ಕಾ ಬಾರ್ ಅಂಗಡಿಗಳ ಮೇಲೆ ದಾಳಿ ಮಾಡಿ, 4.50 ಲಕ್ಷ ರೂ. ಮೌಲ್ಯದ ಹುಕ್ಕಾ ವಶ ಪಡೆಸಿಕೊಂಡಿದ್ದಾರೆ.

belagavi-police-raid-on-hookah-bar-shops-and-seized-4-lakh-worth-hookah
ಹುಕ್ಕಾ ಬಾರ್ ಅಂಗಡಿಗಳ ಮೇಲೆ ಬೆಳಗಾವಿ ಪೊಲೀಸರ ದಾಳಿ: 4.50 ಲಕ್ಷ ಮೌಲ್ಯದ ಹುಕ್ಕಾ ಜಪ್ತಿ, ಇಬ್ಬರ ಬಂಧನ

By ETV Bharat Karnataka Team

Published : Mar 13, 2024, 3:29 PM IST

ಹುಕ್ಕಾ ಬಾರ್ ಅಂಗಡಿಗಳ ಮೇಲೆ ಬೆಳಗಾವಿ ಪೊಲೀಸರ ದಾಳಿ: 4.50 ಲಕ್ಷ ಮೌಲ್ಯದ ಹುಕ್ಕಾ ಜಪ್ತಿ, ಇಬ್ಬರ ಬಂಧನ

ಬೆಳಗಾವಿ: ಹುಕ್ಕಾ ಬಾರ್ ಅಂಗಡಿಗಳ ಮೇಲೆ ಬೆಳಗಾವಿ ಪೊಲೀಸರು ದಾಳಿ ಮಾಡಿ ಅಂದಾಜು 4.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ ಹುಕ್ಕಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಂಗಳೂರು ಮೂಲದ ಸದ್ಯ ಅನಗೋಳ ನಿವಾಸಿಗಳಾದ ಅಬೂಬಕ್ಕರ್ ಜೈನಬ್​ ಸಿದ್ದೀಕ್ (31) ಹಾಗೂ ಶಬಾಬ್ ಶಕೀಲ್ ಅಹ್ಮದ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಕೇಂದ್ರ ಸರ್ಕಾರದಿಂದ ನಿಷೇಧವಾಗಿರುವ ಹುಕ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಯಾವುದೇ ಲೈಸನ್ಸ್ ಇಲ್ಲದೇ, ಎಲ್ಲಿಂದಲೋ ತಂದು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಮಾಳಮಾರುತಿ, ಮಾರ್ಕೆಟ್ ಹಾಗೂ ಟಿಳಕವಾಡಿ ಠಾಣೆ ಪೊಲೀಸರು ಜಂಟಿಯಾಗಿ ಹುಕ್ಕಾ ಬಾರ್ ಅಂಗಡಿಗಳ ಮೇಲೆ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ 75,500 ರೂ. ಮೌಲ್ಯದ ವಿವಿಧ ಕಂಪನಿಯ 126 ಹುಕ್ಕಾಗಳು, 62 ಸಾವಿರ ರೂ. ಮೌಲ್ಯದ ವಿವಿಧ ಕಂಪನಿಯ 51 ರೋಲ್ ಪೇಪರ್, 15,500 ರೂ. ಮೌಲ್ಯದ 30 ವಿವಿಧ ಕಂಪನಿಯ ಚಾರ್ಕೋಲ್, 20,300 ರೂ. ಮೌಲ್ಯದ ವಿವಿಧ ಕಂಪನಿಯ 120 ಬಾಂಗ್ ಪೈಪ್​ಗಳು, 41,500 ರೂ. ಮೌಲ್ಯದ 25 ಪಾಕೆಟ್​ ವಿದೇಶಿ ಸಿಗರೇಟ್, 25,300 ರೂ. ಮೌಲ್ಯದ ವಿವಿಧ ಕಂಪನಿಯ ತಂಬಾಕಿನ ಪಾಕೆಟ್ ಸೇರಿದಂತೆ 16, 500 ರೂ. ಮೌಲ್ಯದ ವಿವಿಧ ಕಂಪನಿಯ ಪ್ಲೇವರ್ಸ್ ಪಾಕೆಟ್ ಸೇರಿ ಒಟ್ಟು 4.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯ ಕಾರ್ಯಾಚರಣೆಯಲ್ಲಿ ಎಸಿಪಿ ಸದಾಶಿವ ಕಟ್ಟಿಮನಿ ಸೇರಿ ಮತ್ತಿತರರು ಭಾಗಿಯಾಗಿದ್ದರು.

ಈ ಕುರಿತು ಡಿಸಿಪಿ ರೋಹನ್ ಜಗದೀಶ್​ ಮಾತನಾಡಿ, "ಮೂರು ತಂಡಗಳನ್ನು ರಚಿಸಿ ಹುಕ್ಕಾ ಬಾರ್ ಮೇಲೆ ದಾಳಿ ಮಾಡಿದ್ದೇವೆ. ಇಲ್ಲಿ ವಿದೇಶಿ ತಂಬಾಕು ಉತ್ಪನ್ನ ಹಾಗೂ ಸಿಗರೇಟ್ ತರಿಸಿ ಮಾರಾಟ ಮಾಡಲಾಗುತ್ತಿತ್ತು. ಬೆಲೆ ಬಾಳುವ ಇ - ಸಿಗರೇಟ್​ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಕೇರಳ ಮೂಲದ ಆರೋಪಿಗಳಿಂದ ನಿಷೇಧಿತ ಹುಕ್ಕಾ ಬಾರ್ ತಂಬಾಕು ಉತ್ಪನ್ನಗಳನ್ನು ಅನಧಿಕೃತವಾಗಿ‌ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದೇವೆ. ವಿವಿಧ ಕಂಪನಿಯ ಹುಕ್ಕಾಗಳನ್ನು ಖದೀಮರು ಸುರಂಗದಲ್ಲಿ ಅಡಗಿಸಿಟ್ಟಿದ್ದರು" ಎಂದು ತಿಳಿಸಿದರು.

ಇದನ್ನೂ ಓದಿ:ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ, ಮಾಲೀಕ ಮತ್ತು ಆತನ ಸಹಚರರ ವಿರುದ್ಧ ಎಫ್ಐಆರ್

ABOUT THE AUTHOR

...view details