2024ಕ್ಕೆ ಮತ್ತೊಮ್ಮೆ ಮೋದಿ' ಗೋಡೆ ಬರಹಕ್ಕೆ ಯಡಿಯೂರಪ್ಪ ಚಾಲನೆ ಮೈಸೂರು: 2024ಕ್ಕೆ ಮತ್ತೊಮ್ಮೆ ಮೋದಿ 3ನೇ ಅವಧಿಗೆ ಪ್ರಧಾನಿ ಆಗಲಿ ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು 'ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹ' ಕಾರ್ಯಕ್ರಮಕ್ಕೆ ನಗರದ ಕಾಳಿದಾಸ ರಸ್ತೆಯ ಶ್ರೀರಾಮ ಮಂದಿರದ ಬಳಿ ಚಾಲನೆ ನೀಡಿದರು.
ಬಿ ಎಸ್ ಯಡಿಯೂರಪ್ಪ ಅವರು ಮೈಸೂರಿನ ನಗರದ ಕಾಳಿದಾಸ ರಸ್ತೆಯ ಶ್ರೀರಾಮ ಮಂದಿರ ಬಳಿಯ ಮನೆಯೊಂದರ ಗೋಡೆ ಬರಹದ ದೀಪಕ್ಕೆ ಬಣ್ಣ ಹಾಕುವ ಮೂಲಕ ಉದ್ಘಾಟನೆ ಮಾಡಿದರು.
ನಿನ್ನೆ ಮೈಸೂರಿಗೆ ಆಗಮಿಸಿದ್ದ ಅವರು ಬುಧವಾರ ಸಂಜೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು. ಇಂದು ಬೆಳಗ್ಗೆ ಮತ್ತೊಮ್ಮೆ ಮೋದಿ ಕಾರ್ಯಕ್ರಮದ ಗೋಡೆ ಬರಹಕ್ಕೆ ಚಾಲನೆ ನೀಡಿದರು. ನಂತರ ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ ಮೈಸೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ 3ನೇ ದಿನದ ಸುತ್ತೂರು ಜಾತ್ರಾ ಮಹೋತ್ಸವ ರಥೋತ್ಸವ ಹಾಗೂ ದನಗಳ ಜಾತ್ರೆಯ ಉದ್ಘಾಟನೆ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ವೈ ಭಾಗವಹಿಸಲು ತೆರಳಿದರು.
ಇದನ್ನೂಓದಿ:ಮನುಷ್ಯ ಮನುಷ್ಯರ ನಡುವೆ ದ್ವೇಷ ಭಾವನೆ ಸರಿಯಲ್ಲ: ಸಿಎಂ ಸಿದ್ದರಾಮಯ್ಯ