ಕಲಬುರಗಿ :ಜಮೀನು ವ್ಯಾಜ್ಯದ ಹಿನ್ನೆಲೆ ಪೆಟ್ರೋಲ್ ಬಾಂಬ್ ಎಸೆದು ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆತಾಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ. ಗುಂಡೆರಾವ್ ಕುಟುಂಬದವರ ಹತ್ಯೆಗೆ ಶಿವಲಿಂಗಪ್ಪ ಎಂಬುವವರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಏನಿದು ಘಟನೆ?:ಕಡಣಿ ಗ್ರಾಮದ ಗುಂಡೆರಾವ್ ಸಹೋದರ ಸಂಬಂಧಿ ಶಿವಲಿಂಗಪ್ಪ ಎಂಬುವವರು ತನ್ನ 4 ಎಕರೆ ಜಮೀನನ್ನ ಮಾರಾಟ ಮಾಡಿ 13 ಲಕ್ಷ ರೂ ಅಡ್ವಾನ್ಸ್ ಹಣ ಪಡೆದಿದ್ದರು. ಬಳಿಕ ಆ ನಾಲ್ಕು ಎಕರೆ ಜಮೀನು ರಿಜಿಸ್ಟರ್ ಮಾಡುವ ವಿಚಾರದಲ್ಲಿ ಗುಂಡೆರಾವ್ ಮತ್ತು ಶಿವಲಿಂಗಪ್ಪ ಮಧ್ಯೆ ಮನಸ್ತಾಪ ಬಂದಿದೆ. ಅದಕ್ಕೆ ಇಬ್ಬರ ಮಧ್ಯೆ ಕಳೆದ ಹಲವು ದಿನಗಳಿಂದ ಜಗಳ ಹೊಡೆದಾಟ ನಡೆದಿತ್ತು.
ಈ ಬಗ್ಗೆ ಮನೆ ಮಾಲೀಕ ಗುಂಡೆರಾವ್ ಮಾತನಾಡಿ, ಘಟನೆಯಿಂದ ಕೆರಳಿದ ಶಿವಲಿಂಗಪ್ಪ ಬಟ್ಟೆಯನ್ನ ಬಾಲ್ ಆಕಾರ ಮಾಡಿ ಅದನ್ನ ಪೆಟ್ರೋಲ್‌ನಲ್ಲಿ ಅದ್ದಿ ಮನೆಯೊಳಗೆ ಬಿಸಾಕಿದ್ದಾನೆ. ನಾವು ಮನೆ ಬಾಗಿಲು ಹಾಕಿಕೊಂಡೆವು. ಇದೇ ಸರಿಯಾದ ಸಮಯ ಅಂತಾ ಕೀಟನಾಶಕ ಸ್ಪ್ರೈಯರ್‌ನಿಂದ ಮನೆಯೊಳಗೆ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.