ಹಾಸನ:ಬಿಜೆಪಿ ಮತ್ತುಆರ್ಎಸ್ಎಸ್ ಮುಖಂಡ ಐನೆಟ್ ವಿಜಯ್ ಕುಮಾರ್ ಮತ್ತು ಅವರ ಅಂಗಡಿ ಮೇಲೆ 50 ಜನರ ತಂಡವೊಂದು ಏಕಾಏಕಿ ದಾಳಿ ಮಾಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ವಿಜಯ್ ಕುಮಾರ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅಂಗಡಿಯ ಗಾಜು ಮತ್ತು ಕಂಪ್ಯೂಟರ್ಗಳನ್ನು ಒಡೆದು ಹಾಕಿ ಪರಾರಿಯಾಗಿದ್ದಾರೆ.
ಎಂದಿನಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಮೇಲೆ ಹಲ್ಲೆ ಮಾಡಿ, ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ. ಹಲ್ಲೆ ತಡೆಯಲು ಮುಂದಾದ ವಿಜಯ್ ಕುಮಾರ್ ಸ್ನೇಹಿತರ ಮೇಲೂ ದಾಳಿ ಮಾಡಿದ್ದಾರೆ. ನಂತರ ಸ್ಥಳೀಯರು ಒಟ್ಟಾಗಿ ಹಿಡಿಯಲು ಮುಂದಾದಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿಜಯ್ ಕುಮಾರ್ ಮತ್ತು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳ ಬಂಧನಕ್ಕೆ ಮೂರು ಪೊಲೀಸ್ ತಂಡ ರಚಿಸಲಾಗಿದೆ.