ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮದ್ಯ ಸೇವನೆ ವಿಚಾರಕ್ಕೆ ಕೊಲೆ: ಮೂವರು ಆರೋಪಿಗಳ ಬಂಧನ - HUBBALLI MURDER CASE - HUBBALLI MURDER CASE

ತಾರಿಹಾಳದ ಲೋಟಸ್ ಬಾರ್ ಹತ್ತಿರದಲ್ಲಿ ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣದ ಆರೋಪಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂವರು ಆರೋಪಿಗಳ ಬಂಧನ
ಮೂವರು ಆರೋಪಿಗಳ ಬಂಧನ

By ETV Bharat Karnataka Team

Published : Apr 10, 2024, 10:10 AM IST

ಹುಬ್ಬಳ್ಳಿ:ನಗರದ ಹೊರವಲಯದ ತಾರಿಹಾಳದ ಲೋಟಸ್ ಬಾರ್ ಹತ್ತಿರ ಇರುವ ಚಿಕ್ಕು ತೋಟದಲ್ಲಿ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ಮೂವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಏ.7 ರಂದು ರಾತ್ರಿ ವೇಳೆ ಮದ್ಯ ಸೇವಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಷಣ್ಮುಖಪ್ಪ ಹಡಪದ ಎಂಬಾತನನ್ನು ಪ್ರವೀಣ್ ಕುಬಿಹಾಳ (25), ಹನುಮಂತ ಮಾಳಗಿಮನಿ (25), ಸಹದೇವ ನೂಲ್ವಿ (24) ಎಂಬ ಆರೋಪಿಗಳು ಕೊಲೆ ಮಾಡಿದ್ದರು.‌ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ‌ ಒಂದು ದ್ವಿಚಕ್ರ ವಾಹನ ಮತ್ತು ನಾಲ್ಕು ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಾಂಗ‌ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರವಾಡ ಪೊಲೀಸ್ ಆಯುಕ್ತರಾದ ಡಾ. ಗೋಪಾಲ ಬ್ಯಾಕೋಡ, ಧಾರವಾಡ ಎಸಿಪಿ ಎನ್.ವಿ. ಭರಮನಿ, ಧಾರವಾಡ ಗ್ರಾಮೀಣ ಪ್ರದೇಶ ಡಿಎಸ್​​ಪಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಯಿತು. ಈ ತಂಡದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್​​ಪೆಕ್ಟರ್​​​ ಮುರಗೇಶ ಚನ್ನಣ್ಣವರ, ಪಿಎಸ್ಐ ಸಚಿನ ಅಲಮೇಲಕರ, ಪಿಎಸ್ಐ ಅಭಿಜಿತ್, ಎಎಸ್​ಐ ಎನ್.ಎಮ್.ಹೊನ್ನಪ್ಪನವರ, ನಾರಾಯಣ ಹಿರೇಹೊಳ್ಳಿ ಹಾಗೂ ಸಿಬ್ಬಂದಿಗಳಾದ ಎ.ಎ.ಕಾಕರ, ಚನ್ನಪ್ಪ ಬಳ್ಳೊಳ್ಳಿ, ಸಿ.ಬಿ.ಜನಗಣ್ಣವರ, ನಾಗಪ್ಪ ಸಂಶಿ, ವಾಯ್.ಡಿ.ಕುಂಬಾರ, ನಾಗಯ ಮಾಣಿಕ, ಪ್ರೇಮನಾಥ ಹಾಗೂ ತಾಂತ್ರಿಕ ಸಿಬ್ಬಂದಿಗಳಾದ ಆರೀಫ್ ಗೋಲಂದಾಜ, ವಿಠ್ಠಲ ಇದ್ದು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಪ್ರಕರಣವನ್ನು ಭೇದಿಸಿದ ವಿಶೇಷ ತನಿಖಾ ತಂಡದ ಸದಸ್ಯರಿಗೆ‌ ಬಹುಮಾನ ಘೋಷಿಸಲಾಗಿದೆ. ‌

ಇದನ್ನೂ ಓದಿ:ಇಸ್ಪೀಟ್ ಆಡುತ್ತಿದ್ದ ಬಾಮೈದುನನಿಗೆ ಚಾಕು ಇರಿದು ಕೊಂದ ಬಾವ - Murder

ABOUT THE AUTHOR

...view details