ಬೆಂಗಳೂರು:ಕಾರು ಚಾಲಕನ ಮುಖಕ್ಕೆ ಉಗಿದು ದುರ್ವವರ್ತನೆ ತೋರಿದ್ದ ಆಟೋ ಚಾಲಕನನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರು ಚಾಲಕನ ಮುಖಕ್ಕೆ ಉಗಿದ ಆಟೋ ಚಾಲಕನ ಬಂಧನ! - Auto Driver Arrest - AUTO DRIVER ARREST
ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರು ಚಾಲಕನ ಮುಖಕ್ಕೆ ಉಗಿದಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Published : Aug 10, 2024, 2:05 PM IST
ಆಟೋ ಚಾಲಕ ಬಾಬಾಸಾಬ್ ಬಂಧಿತ. ಕಳೆದ ಎರಡು ದಿನಗಳ ಹಿಂದೆ ಮಾರತ್ ಹಳ್ಳಿಯ ಯಮಲೂರು ಸಿಗ್ನಲ್ ಬಳಿ ಕಾರು ಹಾಗೂ ಆಟೋ ಚಾಲಕರ ನಡುವೆ ಕಿರಿಕ್ ಆಗಿತ್ತು. ಗಲಾಟೆ ಹೆಚ್ಚಾದಂತೆ ಕಾರಿನ ಮಿರರ್ಗೆ ಹೊಡೆದು ಬಾಬಾಸಾಬ್ ಅತಿರೇಕರದ ವರ್ತನೆ ತೋರಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಾರು ಚಾಲಕನ ಮುಖಕ್ಕೆ ಉಗಿದಿದ್ದ. ಅನುಚಿತ ವರ್ತನೆ ಮಾಡಿರುವುದನ್ನ ಚಾಲಕ ಅಲೆಕ್ಸ್ ಬೋಬಿ ಎಂಬುವರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಈ ಸಂಬಂಧ ದೂರು ನೀಡಿದ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡು ಆಟೋ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆ ಮೇಲೆ ರ‍್ಯಾಪಿಡೋ ಆಟೋ ಚಾಲಕನಿಂದ ಹಲ್ಲೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ