ಕರ್ನಾಟಕ

karnataka

ETV Bharat / state

ಸಿಇಟಿ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ: ಸಿಇಟಿ ಶುಲ್ಕ ಪಾವತಿ, ಪರೀಕ್ಷೆ ಆಯ್ಕೆಗೆ ಏಪ್ರಿಲ್​ 12ರ ಗಡುವು - CET Deadline - CET DEADLINE

ಸಿಇಟಿ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶವೊಂದನ್ನು ಹೊರಡಿಸಿದೆ. ಸಿಇಟಿ ಶುಲ್ಕ ಪಾವತಿ ಮತ್ತು ಪರೀಕ್ಷೆ ಆಯ್ಕೆಗೆ ಏಪ್ರಿಲ್​ 12ಕ್ಕೆ ಕೊನೆಯ ದಿನವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ನೀಡಿದೆ.

DEADLINE FOR CET FEE PAYMENT  DEADLINE FOR CET EXAM SELECTION  BENGALURU
ಸಿಇಟಿ ಬರೆಯುವ ವಿದ್ಯಾರ್ಥಿಗಳ ಗಮನಕ್ಕೆ

By ETV Bharat Karnataka Team

Published : Apr 10, 2024, 2:21 PM IST

ಬೆಂಗಳೂರು: ಏ.18 ಮತ್ತು 19ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಆನ್​ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮನವಿ ಮೇರೆಗೆ ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆಯ ಆಯ್ಕೆ ಮಾಡಿಕೊಳ್ಳಲು ಕೆಲವು ಷರತ್ತುಗಳೊಂದಿಗೆ ಅನುಮತಿ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.

ಇದುವರೆಗೂ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳು ಏ.10ರ ಬೆಳಗ್ಗೆಯಿಂದ ಏ.12ರ ಸಂಜೆ 5 ಗಂಟೆಯವರೆಗೆ ಶುಲ್ಕ ಪಾವತಿಸಬಹುದಾಗಿದೆ. ಇಂತಹ ಅಭ್ಯರ್ಥಿಗಳು 'ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು' ಇವರ ಹೆಸರಿಗೆ 600 ರೂ. ಮೊತ್ತದ ಡಿ.ಡಿ. ತೆಗೆಸಿಕೊಂಡು, ಸಿಇಟಿ ಅರ್ಜಿ ನಮೂನೆ ಸಹಿತ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನು, ಅರ್ಜಿಯಲ್ಲಿ ಕೆಲವರು ಕೇವಲ ನೀಟ್ ಆಯ್ಕೆ ಮಾಡಿಕೊಂಡಿದ್ದು, ಅಂತಹವರು ಈಗ ಸಿಇಟಿ ಪರೀಕ್ಷೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತಹ ಅಭ್ಯರ್ಥಿಗಳು ಕೂಡ ಏ.12ರ ಸಂಜೆ 5 ಗಂಟೆಯೊಳಗೆ ಪ್ರಾಧಿಕಾರಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

ಹೀಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಜ್ಯದ ಯಾವುದೇ ಭಾಗದಲ್ಲಿ ಖಾಲಿ‌ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಅವಕಾಶ ಕೊಡಲಾಗುವುದು. ಅಭ್ಯರ್ಥಿಗಳು ಇದಕ್ಕೆ ಸಿದ್ಧರಿರಬೇಕು ಮತ್ತು ಈ ಹಂತದಲ್ಲಿ ಅರ್ಜಿ ಪರಿಗಣಿಸುವುದರಿಂದ ದತ್ತಾಂಶಗಳಲ್ಲಿ ಆಗಲಿರುವ ವ್ಯತ್ಯಾಸವನ್ನು ಆಕ್ಷೇಪಿಸಲು ಅವಕಾಶ ಇರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಓದಿ:ಸಿಇಟಿ ಪರೀಕ್ಷೆಗೆ ತಪ್ಪಾದ ಕೇಂದ್ರ ಆಯ್ಕೆ: ಏ.12ರೊಳಗೆ ಮನವಿ ಸಲ್ಲಿಸಲು ಅವಕಾಶ - CET

ABOUT THE AUTHOR

...view details