ಕರ್ನಾಟಕ

karnataka

ETV Bharat / state

ಕೊಳವೆ ಬಾವಿಗಳ ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ - AI Tech for Borewell Management - AI TECH FOR BOREWELL MANAGEMENT

ಕೊಳವೆ ಬಾವಿಗಳನ್ನು ಸಮರ್ಥವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸುವುದಕ್ಕಾಗಿ ಜಲಮಂಡಳಿ ಆರ್ಟಿಫಿಶಿಯಲ್​​ ಇಂಟಲಿಜೆನ್ಸ್ (AI)​ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದು, ಸೋಮವಾರ ಟ್ರಯಲ್​ ರನ್​​​​ ನಡೆಸಲಾಯಿತು.

ಕೊಳವೆ ಬಾವಿಗಳ ನಿರ್ವಹಣೆಗೆ ಎಐ ತಂತ್ರಜ್ಞಾನ ಅಳವಡಿಕೆ
ಕೊಳವೆ ಬಾವಿಗಳ ನಿರ್ವಹಣೆಗೆ ಎಐ ತಂತ್ರಜ್ಞಾನ ಅಳವಡಿಕೆ

By ETV Bharat Karnataka Team

Published : Mar 26, 2024, 7:03 AM IST

Updated : Mar 26, 2024, 9:04 AM IST

ಕೊಳವೆ ಬಾವಿಗಳ ನಿರ್ವಹಣೆಗೆ ಎಐ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು:ಕೊಳವೆ ಬಾವಿಗಳು ಬತ್ತಿ ಹೋಗುವುದನ್ನು ತಡೆಯಲು ಜಲಮಂಡಳಿ ಆರ್ಟಿಫಿಶಿಯಲ್​​ ಇಂಟಲಿಜೆನ್ಸ್ (ಎಐ)​ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಸೋಮವಾರ ನಗರದ ಚಿನ್ನಪ್ಪ ಗಾರ್ಡನ್​ನಲ್ಲಿ ಎಐ ಮತ್ತು ಐಒಟಿ ತಂತ್ರಜ್ಞಾನ ಅಳವಡಿಸಲಾಗಿರುವ ಕೊಳವೆ ಬಾವಿಯ ಟ್ರಯಲ್​ ರನ್​​​​ ಪರಿಶೀಲಿಸಲಾಯಿತು.

ಬಳಿಕ ರಾಮ್​ ಪ್ರಸಾತ್​ ಮನೋಹರ್ ಮಾತನಾಡಿ, "ನಗರದಲ್ಲಿ 14 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ. ಕೊಳವೆ ಬಾವಿಗಳ ಪಂಪ್‌ ಸೆಟ್‌ಗಳನ್ನು ಹೆಚ್ಚಿನ ಸಮಯ ಬಳಸಬೇಕು. ನೀರಿಲ್ಲದೇ ಇರುವುದು ಗೊತ್ತಾಗದೇ ಮೋಟಾರ್‌ ಓಡಿಸುವುದರಿಂದ ಬಹಳಷ್ಟು ಕೊಳವೆ ಬಾವಿಗಳು ರಿಪೇರಿಗೆ ಬರುತ್ತಿವೆ. ಕೊಳವೆ ಬಾವಿಗಳು ಪದೇ ಪದೆ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧುನಿಕ ಎಐ ಮತ್ತು ಐಒಟಿ ತಂತ್ರಜ್ಞಾನ ಅಳವಡಿಸಿರುವ ಕೊಳವೆ ಬಾವಿಯ ಟ್ರಯಲ್ ರನ್​ ಕಾರ್ಯವನ್ನು ಪರಿಶೀಲಿಸಲಾಗಿದೆ" ಎಂದರು.

ಕೊಳವೆ ಬಾವಿಗಳ ನಿರ್ವಹಣೆಗೆ ಎಐ ತಂತ್ರಜ್ಞಾನ ಅಳವಡಿಕೆ

"ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಕೊಳವೆ ಬಾವಿಗಳನ್ನು ಸಮರ್ಥವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸುವುದು ಹಾಗೂ ಅವುಗಳ ಅನಗತ್ಯ ಬಳಕೆಯನ್ನು ತಪ್ಪಿಸುವುದು ಸಾಧ್ಯವಾಗುತ್ತದೆ. ಬಾವಿಯಲ್ಲಿ ನೀರಿಲ್ಲದೇ ಇರುವಂತಹ ಸಮಯದಲ್ಲಿ ಬಳಸುವುದನ್ನು ತಪ್ಪಿಸುವುದರ ಮೂಲಕ ಕೊಳವೆ ಬಾವಿಗಳು ನಿಷ್ಕ್ರಿಯವಾಗುವುದನ್ನು ತಪ್ಪಿಸಬಹುದು".

"ಕೊಳವೆ ಬಾವಿಗಳನ್ನು ಸುಸ್ಥಿರವಾಗಿ ಹಾಗೂ ತಾಂತ್ರಿಕವಾಗಿ ಬಳಸಬೇಕು. ಅಲ್ಲದs, ಪದೇ ಪದೆ ಮೋಟಾರ್ ಸುಟ್ಟು ಹೋಗುವಂತಹ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ನಿಯಂತ್ರಿಸಬೇಕು. ಈ ಕ್ರಮಗಳಿಂದ ನಿರ್ವಹಣೆಯ ವೆಚ್ಚ ಕಡಿಮೆಗೊಳಿಸಬಹುದು" ಎಂದು ತಿಳಿಸಿದರು.

ಇದನ್ನೂ ಓದಿ:'ಕಾವೇರಿ ನೀರು ಅಥವಾ ಕೊಳವೆ ಬಾವಿ ನೀರು ಬಳಸಿ ರೈನ್ ಡ್ಯಾನ್ಸ್ ಆಯೋಜಿಸಿದ್ದರೆ ಕ್ರಮ' - Water Board Alert

Last Updated : Mar 26, 2024, 9:04 AM IST

ABOUT THE AUTHOR

...view details