ರಾಯಚೂರು:ದೆಹಲಿಯಲ್ಲಿ ಸಭೆ ನಡೆಯುತ್ತಿದೆ ಇಂದು ಅಥವಾ ನಾಳೆ ಲೋಕಸಭೆ ಚುನಾವಣೆಗಾಗಿ ರಾಜ್ಯದ 20 ಅಭ್ಯರ್ಥಿಗಳು ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ದೇವೇಂದ್ರಪ್ಪ, ರಾಯಚೂರಿನಲ್ಲಿ ರಾಜಾ ಅಮರೇಶ್ವರ ನಾಯಕ್ ಕೆಲಸ ಮಾಡಿದ್ದಾರೆ. ಪಕ್ಷದ ನಿಯಮಗಳನ್ನು ಆಧರಿಸಿ ಮಾಹಿತಿ ಪಡೆದು ಕೇಂದ್ರದಲ್ಲಿ ಚರ್ಚೆ ಆಗುತ್ತದೆ. ಬಳ್ಳಾರಿಯಿಂದ ನನ್ನನ್ನು ಸೇರಿ ಮೂವರು ಅಭ್ಯರ್ಥಿಗಳ ಹೆಸರು ಕಳುಹಿಸಲಾಗಿದೆ ಜತೆಗೆ ಶಿವಮೊಗ್ಗ, ರಾಯಚೂರಿನಿಂದಲೂ ಮೂವರು ಅಭ್ಯರ್ಥಿಗಳ ಹೆಸರನ್ನ ಕಳುಹಿಸಲಾಗಿದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರದಂತೆ ಕೆಲಸ ಮಾಡುವುದಾಗಿ ತಿಳಿಸಿದರು.
ಇದು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣೆ ಆಗಿದ್ದು ನಾವು ಮಾಡಿದ ಕೆಲಸ ಜನರಿಗೆ ತಿಳಿಸುತ್ತೇವೆ. ದೇಶದಲ್ಲಾದ ಅಭಿವೃದ್ಧಿ ಕೆಲಸದ ಬಗ್ಗೆ ಮತದಾರರಿಗೆ ಹೇಳುತ್ತೇವೆ, ದೇಶದ ಸಲುವಾಗಿ ಹಾಗೂ ಪ್ರಧಾನಿ ಅವರ ಮತ್ತೊಮ್ಮೆ ಗೆಲುವಿಗಾಗಿ ಶ್ರಮ ವಹಿಸುತ್ತೇವೆ ಎಂದರು.
ನಂತರ ಸಂಸದ ಅನಂತ ಕುಮಾರ್ ಹೆಗಡೆ ಸಂವಿಧಾನದ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಅದನ್ನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಈಗಾಗಲೇ ಪಕ್ಷ ಕೂಡ ಸ್ಪಷ್ಟನೆ ನೀಡಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದು ತಿಳಿಸಿದೆ. ಬಿಜೆಪಿ ಡಾ.ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನದ ಅಡಿ ಸರ್ಕಾರ ನಡೆಸುತ್ತಿದೆ. ದೇಶದ ಜನರು ಭಗವದ್ಗೀತಾ, ರಾಮಾಯಣಕ್ಕೆ ಎಷ್ಟು ಗೌರವ ಕೊಡುತ್ತಾರೋ ಅದೇ ರೀತಿ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದರು
ಇದನ್ನೂ ಓದಿ:ಸಂವಿಧಾನದಿಂದಾಗಿ ಸರ್ವರಿಗೂ ಸಮಾನ ಅವಕಾಶ ಲಭಿಸುತ್ತಿದೆ: ಸಚಿವ ಪ್ರಿಯಾಂಕ್ ಖರ್ಗೆ