ಚಿಕ್ಕಮಗಳೂರು:ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕ ಕಚೇರಿ ಸುತ್ತಮುತ್ತ ನಿರ್ಗತಿಕಳಂತೆ ಅಲೆಯುತ್ತಿದ್ದ 72 ವರ್ಷದ ವೃದ್ಧೆಯೊಬ್ಬರನ್ನು ತಹಶೀಲ್ದಾರ್, ಮಹಿಳಾ ಠಾಣೆ ಪೊಲೀಸರು ಹಾಗೂ ಸಹನಾ ರೂಬಿನ್ ಸಾಮಾಜಿಕ ಸೇವಾ ಸಂಸ್ಥೆಯನ್ನು ಮರಳಿ ಗೂಡಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಅಚ್ಚಮ್ಮಳೇ ಆ ವೃದ್ಧೆ. ವೃದ್ಧೆ ಹಲವು ದಿನಗಳಿಂದ ತಾಲೂಕು ಕಚೇರಿ ಬಳಿ ರಸ್ತೆ ಬದಿ ಬಿದ್ದ ಕಸವನ್ನೆಲ್ಲ ಒಂದುಗೂಡಿಸುತ್ತಾ, ಭಿಕ್ಷೆ ಬೇಡಿ ಜೀವನ ಮಾಡುತ್ತಾ ರಸ್ತೆ ಬದಿಯಲ್ಲೇ ಮಲಗುತ್ತಿದ್ದರು. ಇದನ್ನು ಕಂಡ ಚಿಕ್ಕಮಗಳೂರಿನ ತಹಶೀಲ್ದಾರ್, ವೃದ್ಧೆಯನ್ನು ಸಹನಾ ರೂಬಿನ್ ಟ್ರಸ್ಟ್ ಅವರಿಗೆ ನೋಡಿಕೊಳ್ಳುವಂತೆ ಹೇಳಿದ್ದರು. ರೂಬಿನ್ ಟ್ರಸ್ಟ್ ಆಕೆಗೆ ಊಟ - ಬಟ್ಟೆ ಕೊಟ್ಟು ಆಶ್ರಯ ನೀಡಿದ್ದರು.