ಕರ್ನಾಟಕ

karnataka

ETV Bharat / state

ಹಾವೇರಿ: ಮೆಡಿಕಲ್ ಶಾಪ್​ಗೆ ನುಗ್ಗಿ ಪ್ರೀತಿಸಿದ ಹುಡುಗಿಗೆ ಯುವಕನಿಂದ ಚಾಕು ಇರಿತ - ಶಿಗ್ಗಾಂವ ಪೋಲೀಸ್ ಠಾಣೆ

ಶಿಗ್ಗಾಂವಿ ಪಟ್ಟಣದಲ್ಲಿ ಹುಡುಗಿಗೆ ಚಾಕು ಇರಿದ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಹುಡುಗಿಗೆ ಚಾಕು ಇರಿತ
ಹುಡುಗಿಗೆ ಚಾಕು ಇರಿತ

By ETV Bharat Karnataka Team

Published : Jan 27, 2024, 5:42 PM IST

ಹಾವೇರಿ :ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಯುವಕನೋರ್ವ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ. ಮಹೇಶ್ ಮೈಸೂರು (25) ಎಂಬಾತ ಚಾಕು ಇರಿದಿರುವ ಆರೋಪಿ. ಶಿಗ್ಗಾಂವಿ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಚಾಕು ಇರಿತಕ್ಕೊಳಗಾಗಿರುವ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಶಿಗ್ಗಾಂವಿ ಪಟ್ಟಣದ ಖಾಸಗಿ ಮೆಡಿಕಲ್ ಶಾಪ್ ವೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳಿಂದ ಹಲ್ಲೆಗೊಳಗಾದ ಈ ಯುವತಿ ಮತ್ತು ಆರೋಪಿ ಮಹೇಶ್ ಇಬ್ಬರು ಪ್ರೀತಿಸುತ್ತಿದ್ದರು. ಈ ನಡುವೆ ಬೇರೆ ಹುಡುಗನ ಜೊತೆ ಯುವತಿ ಸಂಪರ್ಕದಲ್ಲಿದ್ದಾಳೆಂದು ಕೋಪಗೊಂಡ ಆರೋಪಿ ಮಹೇಶ್​ ಆಕೆ ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದ ಯುವತಿಯ ಕೈ ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿವೆ. ಶಿಗ್ಗಾಂವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಯುವತಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇನ್ನೊಂದೆಡೆ ಘಟನೆಯಲ್ಲಿ ಆರೋಪಿ ಮಹೇಶ್​ ಕೈಗೂ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಶಿವಮೊಗ್ಗ: ಮದುವೆ ನಿರಾಕರಿಸಿದ ಪ್ರೇಯಸಿಗೆ ಚಾಕು ಇರಿದ ಪ್ರಿಯಕರ

ABOUT THE AUTHOR

...view details