ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಸಿಎ ನಿವೇಶನದಡಿ ಸರ್ಕಾರಿ ಸ್ವತ್ತು ಪಡೆದ ಆರೋಪ: ಮಲ್ಲಿಕಾರ್ಜುನ ಖರ್ಗೆ, ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು - Land Allocation Case

ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರತ್ಯೇಕ ಎರಡು ಕಡೆಗಳಲ್ಲಿ ಸಿಎ ನಿವೇಶನ ಹಂಚಿಕೆ ಮಾಡಿಕೊಂಡಿರುವ ಆರೋಪ ಸರ್ಕಾರಿ ಸ್ವತ್ತು ಪಡೆದ ಆರೋಪ ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಕೇಳಿ ಬಂದಿದ್ದು, ಈ ಬಗ್ಗೆ ಲೋಕಾಗೆ ದೂರು ನೀಡಲಾಗಿದೆ.

Allegation of allocation of CA land: Complaint to Lokayukta against Mallikarjun Kharge and family members
ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು ನೀಡಿದ ಎನ್.ಆರ್.ರಮೇಶ್ (ETV Bharat)

ಬೆಂಗಳೂರು:ರಾಜಕೀಯ ಪ್ರಭಾವ ಬಳಸಿಕೊಂಡು ಶೈಕ್ಷಣಿಕ ಉದ್ದೇಶಕ್ಕೆ ನಗರದ ಎರಡು ಕಡೆಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ನಾಗರೀಕ ನಿವೇಶನಗಳನ್ನ (ಸಿಎ) ಹಂಚಿಕೆ ಮಾಡಿಕೊಂಡಿರುವ ಆರೋಪ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬಸ್ಥರ ವಿರುದ್ಧ ಕೇಳಿ ಬಂದಿದ್ದು, ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಸಿದ್ದಾರ್ಥ್ ವಿಹಾರ ಟ್ರಸ್ಟ್​ ಹೆಸರಿನಲ್ಲಿ ಬಿಟಿಎಂ ಹಾಗೂ ಬಾಗಲೂರಿನಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಾಗರೀಕ ನಿವೇಶನದಡಿ 5 ಎಕರೆ ಸರ್ಕಾರಿ ಸ್ವತ್ತು ಪಡೆದುಕೊಂಡಿರುವ ಆರೋಪದಡಿ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ, ಪುತ್ರರಾದ ಪ್ರಿಯಾಂಕ್ ಖರ್ಗೆ, ರಾಹುಲ್ ಖರ್ಗೆ ಅಳಿಯ ಹಾಗೂ ಸಂಸದ ರಾಧಾಕೃಷ್ಣ, ಪ್ರಭಾವಕ್ಕೆ ಒಳಗಾಗಿ ಅಕ್ರಮದಲ್ಲಿ ಶಾಮೀಲಾಗಿರುವ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಎಎಸ್ ಅಧಿಕಾರಿ ಸೆಲ್ವಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು ನೀಡಿದ ಎನ್.ಆರ್.ರಮೇಶ್ (ETV Bharat)

ವಂಚನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಭೂ ಕಬಳಿಕೆಗೆ ಸಂಚು ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಹಕಾರದಡಿ ಪ್ರಕರಣ ದಾಖಲಿಸಬೇಕೆಂದು ಕೋರಿ 394 ಪುಟಗಳ ದಾಖಲೆ ಸಮೇತ ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರಾವ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು ನೀಡಿದ ಎನ್.ಆರ್.ರಮೇಶ್ (ETV Bharat)

ಸಿದ್ದಾರ್ಥ್ ವಿಹಾರ ಟ್ರಸ್ಟ್ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹೆಸರಿನಲ್ಲಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ 2014ರಲ್ಲಿ ಬಿಟಿಎಂ ಲೇಔಟ್ 4ನೇ ಹಂತದ 2ನೇ ಬ್ಲಾಕ್​ನಲ್ಲಿ ಬಿಡಿಎಯಿಂದ 86,133 ಚದರ ಅಡಿ ಜಾಗವನ್ನ ನಾಗರಿಕ ನಿವೇಶನ (ಸಿಎ)ವನ್ನ 30 ವರ್ಷಗಳ ಗುತ್ತಿಗೆ ನೀಡಿ ಹಂಚಿಕೆ ಮಾಡಲಾಗಿತ್ತು. ಇದಾದ 10 ವರ್ಷಗಳ ಬಳಿಕ 2024ರ ಮಾರ್ಚ್ 11ರಂದು ಮತ್ತೆ ಶೈಕ್ಷಣಿಕ ಉದ್ದೇಶಕ್ಕಾಗಿ ಕೆಐಎಡಿಬಿಗೆ ಸಿಎ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕೆಐಡಿಬಿಯು ಅನುಮೋದಿಸಿ ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೆಸ್ ಪಾರ್ಕ್​ನ ಹಾರ್ಡ್​ವೇ ಸೆಕ್ಟರ್​ನಲ್ಲಿ 5 ಎಕರೆ ಜಮೀನು ಮಂಜೂರು ಮಾಡಿ ಅರ್ಜಿದಾರರಿಗೆ ಹಂಚಿಕೆ ಪತ್ರ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು ನೀಡಿದ ಎನ್.ಆರ್.ರಮೇಶ್ (ETV Bharat)
ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಗೆ ದೂರು ನೀಡಿದ ಎನ್.ಆರ್.ರಮೇಶ್ (ETV Bharat)

ಸಿದ್ದಾರ್ಥ್ ವಿಹಾರ ಟ್ರಸ್ಟ್​ಗೆ ಹಂಚಿಕೆ ಮಾಡಲಾಗಿರುವ 5 ಎಕರೆ ವಿಸ್ತೀರ್ಣದ ಸಿಎ ನಿವೇಶನದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕನಿಷ್ಠ 110 ಕೋಟಿ ರೂಪಾಯಿವಾಗಿದೆ. ಕೈಗಾರಿಕಾ ನಿವೇಶನ ಕೋರಿ ಅರ್ಜಿ ಸಲ್ಲಿಸುವ ಸಾಮಾನ್ಯ ಉದ್ಯಮಿಗಳು ವರ್ಷಾನುಗಟ್ಟಲೇ ಅಲೆದಾಡಿದರೂ ಸಹ ನಿವೇಶನ ಹಂಚಿಕೆ ಮಾಡದೆಯೇ ಸತಾಯಿಸುವ ಕೆಐಎಡಿಬಿ ಅಧಿಕಾರಿಗಳು ಖರ್ಗೆ ಕುಟುಂಬದ ರಾಜಕೀಯ ಪ್ರಭಾವಗಳಿಗೆ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರ ಒತ್ತಡಕ್ಕೆ ಮಣಿದು ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ 5 ಎಕರೆ ಜಾಗವನ್ನ ಹಂಚಿಕೆ ಕಾರ್ಯದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ಕರ್ತವ್ಯ ಲೋಪ ಎಸಗಲಾಗಿದೆ. ಜಾಗ ನೀಡುವ ಅರ್ಜಿದಾರರಿಗೆ ಬೇರೆ ಕಡೆ ಸಿಎ ನಿವೇಶನ ದೊರೆತಿದೆಯಾ ಎಂಬುದನ್ನ ಪ್ರಮಾಣಪತ್ರ ಪಡೆದುಕೊಳ್ಳದೇ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ರಮೇಶ್ ದೂರಿನಲ್ಲಿ ಆಪಾದಿಸಿದ್ಧಾರೆ.

ಇದನ್ನೂ ಓದಿ:

ಖರ್ಗೆಯವರ ಟ್ರಸ್ಟ್​ಗೆ ಮೆರಿಟ್ ಮತ್ತು ನಿಯಮಗಳ ಅನುಸಾರ ಸಿ.ಎ ನಿವೇಶನ ಹಂಚಿಕೆ: ಸಚಿವ ಎಂ.ಬಿ.ಪಾಟೀಲ್ - Land To Kharge Trust

ಸಿಎ ನಿವೇಶನ ಮಂಜೂರಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ: ಸಚಿವ ಪ್ರಿಯಾಂಕ್​ ಖರ್ಗೆ - Priyank Kharge

ಸಿದ್ಧಾರ್ಥ ವಿಹಾರ ಟ್ರಸ್ಟ್ ಬಗ್ಗೆ ರಾಜ್ಯಪಾಲರು ವರದಿ ಕೇಳಿರುವುದು ಸಂತೋಷ: ಛಲವಾದಿ ನಾರಾಯಣಸ್ವಾಮಿ - CA Site Allotment Case

ABOUT THE AUTHOR

...view details