ಬೆಂಗಳೂರು:ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಪಕ್ಷದ ಹಿರಿಯ ನಾಯಕ ಬಿ.ಎಲ್.ಶಂಕರ್, ಅಜಯ್ ಕುಮಾರ್ ಸರ್ ನಾಯಕ್, ಆನಂದ್ ನ್ಯಾಮೆಗೌಡ, ವಿ.ಎಸ್.ಉಗ್ರಪ್ಪ, ಪಿ.ಆರ್.ರಮೇಶ್ ಸೇರಿದಂತೆ 44 ಉಪಾಧ್ಯಕ್ಷರು, ಜಿ.ಎ.ಬಾವಾ, ಎಚ್.ನಾಗೇಶ್, ವಿ.ಶಂಕರ್, ಎಸ್.ಮನೋಹರ್, ಅನಿಲ್ ಕುಮಾರ್ ಸೇರಿದಂತೆ 144 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.