ಚಿಕ್ಕಮಗಳೂರು:ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಇಂದು ಕೊಪ್ಪ ತಾಲೂಕಿನ ಇತಿಹಾಸ ಪ್ರಸಿದ್ಧ ಹರಿಹರಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಪತ್ನಿ ಪ್ರಗತಿ ಶೆಟ್ಟಿ, ಮಕ್ಕಳು ಹಾಗೂ ಸಂಬಂಧಿಕರೊಂದಿಗೆ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದರ್ಶನ ಪಡೆದ ಅವರು, ಆ ಬಳಿಕ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಕೂಡ ಸ್ವೀಕರಿಸಿದರು. ತುಂಗಾ ನದಿ ತಟದಲ್ಲಿರುವ ಹರಿಹರಪುರ ಕ್ಷೇತ್ರವು ಜಿಲ್ಲೆಯ ಸುಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದು.
ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ (ETV Bharat) ಹಾಗಾಗಿ ಇಲ್ಲಿಗೆ ಸಿನಿಮಾ ತಾರೆಯರು, ರಾಜಕೀಯ ಮುಖಂಡರು, ಭಕ್ತರು ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಹೋಗುವುದು ರೂಢಿ. ಅದರಂತೆ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಆಗಮಿಸಿ ದೇವರ ಆಶೀರ್ವಾದ ಪಡೆದರು. ಭೇಟಿ ವೇಳೆ ರಿಷಬ್ ಶೆಟ್ಟಿ ಮಠದ ಆವರಣದ ಆಂಜನೇಯನ ಬಳಿ ಅಭಿಮಾನಿಗಳ ಜೊತೆ ಫೋಟೋ ತೆಗೆದುಕೊಂಡಿದ್ದಾರೆ.
ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ (ETV Bharat) ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ (ETV Bharat) ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಹಿನ್ನೆಲೆ ಮತ ಹಾಕಲು ಮತಗಟ್ಟೆಗೆ ಬಂದಿದ್ದಾಗ ಕಾಂತಾರ ಸಿನಿಮಾ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1 ಸಿನಿಮಾ ಕಥೆ ಬಗ್ಗೆ ಏನನ್ನು ಹೇಳೋದಿಲ್ಲ. ಎಲ್ಲರೂ ಥಿಯೇಟರ್ನಲ್ಲೇ ಸಿನಿಮಾ ನೋಡಬೇಕು. ಅಲ್ಲದೇ ಕಾಂತಾರ ಸಿನಿಮಾ ಬಗ್ಗೆ ಹೊಂಬಾಳೆ ಸಂಸ್ಥೆಯವರೇ ಅಪ್ಡೇಟ್ ನೀಡುವುದು ಸೂಕ್ತ, ಎಲ್ಲವನ್ನು ಅವರೇ ಘೋಷಣೆ ಮಾಡ್ತಾರೆ ಎಂದು ಹೇಳಿದ್ದರು.
ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ (ETV Bharat) ಅಲ್ಲದೇ ಚಿತ್ರೀಕರಣದಲ್ಲಿ ಯಾವುದೇ ಒತ್ತಡವಿಲ್ಲ. ನನಗೆ ಕಾಂತಾರ 1 ಬಜೆಟ್, ಸಮಯ, ಟೆಕ್ನಿಕಲಿ ದೊಡ್ಡ ಸಿನಿಮಾವಾಗಿತ್ತು. ಈ ಸಲ ಕೂಡ ಹಾಗೇ ಇದೆ. ಅದೇ ಅನುಭವ. ಮತ್ತೆ ಸಿನಿಮಾದಿಂದ ಕಲಿಯುವ ಪ್ರಾಸೆಸ್ ಇದ್ದೇ ಇರುತ್ತದೆ ಎಂದು ತಿಳಿಸಿದ್ದರು.
ಕುಟುಂಬ ಸಮೇತ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ (ETV Bharat) ಇದನ್ನೂ ಓದಿ: ಯೂರೋಪ್ನಲ್ಲಿ ರಿಯಲ್ ಸ್ಟಾರ್ 'ಯುಐ' ಜಪ - UI Movie Songs Work