ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಹತ್ಯೆ ಕೇಸ್: ನಟ ದರ್ಶನ್, ಸಹಚರರ ನ್ಯಾಯಾಂಗ ಬಂಧನ ಸೆ.12ರವರೆಗೆ ವಿಸ್ತರಣೆ - Renukaswamy Murder Case - RENUKASWAMY MURDER CASE

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಸೆ.12ರವರೆಗೆ ವಿಸ್ತರಣೆಯಾಗಿದೆ.

ನಟ ದರ್ಶನ್
ನಟ ದರ್ಶನ್ (ETV Bharat)

By ETV Bharat Karnataka Team

Published : Sep 9, 2024, 2:34 PM IST

ಬೆಂಗಳೂರು:ರೇಣುಕಾಸ್ವಾಮಿಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ಸಹವರ್ತಿಗಳಿಗೆ ಸೆಪ್ಟೆಂಬರ್ 12ರವರೆಗೂ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ 24ನೇ ಎಸಿಎಂಎಂ ನ್ಯಾಯಾಲಯ ಇಂದು ಆದೇಶಿಸಿತು.

ಪ್ರಕರಣದಲ್ಲಿ ಬಂಧಿತರಾಗಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಆಯಾ ಕಾರಾಗೃಹಗಳಿಂದಲೇ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ 60 ಡಿಜಿಟಲ್ ಸಾಕ್ಷ್ಯಗಳನ್ನೊಳಗೊಂಡ ಹಾರ್ಡ್ ಡಿಸ್ಕ್, ಪೆನ್ ಡ್ರೈವ್​ ಅನ್ನು ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಹಾಗೂ ಆರೋಪಿಗಳ ಪ್ರತಿಯನ್ನು ಎರಡು ದಿನಗಳಲ್ಲಿ ನೀಡಲಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ:ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ರದ್ದು ಕೋರಿ ಸಿದ್ದರಾಮಯ್ಯ ಅರ್ಜಿ: ಹೈಕೋರ್ಟ್​ನಲ್ಲಿ ಇಂದು ವಿಚಾರಣೆ - MUDA Scam

ABOUT THE AUTHOR

...view details