ಕರ್ನಾಟಕ

karnataka

ETV Bharat / state

ಮೈಸೂರು: ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ದರ್ಶನ್ - ACTOR DARSHAN

ನಟ ದರ್ಶನ್​ ಅವರು ಇಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿ 'ಡಿ ಬಾಸ್,​ ಡಿ ಬಾಸ್'​ ಎಂದು ಘೋಷಣೆ ಕೂಗಿದರು.

Actor darshan
ನಟ ದರ್ಶನ್ (ETV Bharat)

By ETV Bharat Karnataka Team

Published : Dec 24, 2024, 4:11 PM IST

ಮೈಸೂರು:ನಟ ದರ್ಶನ್ ಅವರಿಂದು ನಗರದ ಖಾಸಗಿ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಸ್‌ ತಮ್ಮ ತೋಟದ ಮನೆಗೆ ಮರಳಿದರು. ಕಾಲು ನೋವಿನಿಂದಾಗಿ ಕಷ್ಟಪಟ್ಟು ದರ್ಶನ್ ನಡೆಯುತ್ತಿರುವ ದೃಶ್ಯ ಕಂಡುಬಂತು.

ದರ್ಶನ್ ಆಗಮಿಸುವ ಮಾಹಿತಿ ತಿಳಿದು ಆಸ್ಪತ್ರೆ ಎದುರು ಜಮಾಯಿಸಿದ ಅಭಿಮಾನಿಗಳು, 'ಡಿ ಬಾಸ್‌, ಡಿ ಬಾಸ್‌' ಎಂದು ಘೋಷಣೆ ಕೂಗಿದರು.

ಆರೋಗ್ಯ ತಪಾಸಣೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸಿದ ನಟ ದರ್ಶನ್ (ETV Bharat)

ಚಾಮುಂಡೇಶ್ವರಿ ತಾಯಿಗೆ ಹರಕೆ ತೀರಿಸಿದ ಪತ್ನಿ:ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ನಿನ್ನೆ (ಸೋಮವಾರ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ದರ್ಶನ್‌ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್‌ ಜೊತೆಗಿದ್ದರು.

ಇದನ್ನೂ ಓದಿ:ದರ್ಶನ್​ಗೆ 2 ವಾರ ಮೈಸೂರಿಗೆ ತೆರಳಲು ನ್ಯಾಯಾಲಯ ಅನುಮತಿ - DARSHAN CAN ENTER MYSURU

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ದರ್ಶನ್‌, ನ್ಯಾಯಾಲಯದ ಅನುಮತಿ ಪಡೆದು ಜನವರಿ 5ರವರೆಗೆ ಮೈಸೂರಿಗೆ ಆಗಮಿಸಿದ್ದಾರೆ. ತಮ್ಮ ಒಡೆತನದ ತೂಗುದೀಪ ಫಾರಂ ಹೌಸ್​ನಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ.

ABOUT THE AUTHOR

...view details