ETV Bharat / state

ಸಿ.ಟಿ.ರವಿ ಪ್ರಕರಣದಲ್ಲಿ ಕರ್ತವ್ಯ ಲೋಪ: ಖಾನಾಪುರ ಸಿಪಿಐ ಸಸ್ಪೆಂಡ್‌- ಗೃಹ ಸಚಿವರು ಹೇಳಿದ್ದೇನು? - C T RAVI CASE

ಇಂದು ನಡೆದ ಸಭೆಯಲ್ಲಿ ಸಿ.ಟಿ.ರವಿ ಪ್ರಕರಣ ಅಥವಾ ಸಿಪಿಐ ಅಮಾನತು ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್​ ತಿಳಿಸಿದ್ದಾರೆ.

Home Minister Dr G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Dec 25, 2024, 5:12 PM IST

Updated : Dec 25, 2024, 6:04 PM IST

ಬೆಳಗಾವಿ: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನ ವೇಳೆ ಕರ್ತವ್ಯಲೋಪ ಆರೋಪದಡಿ ಖಾನಾಪುರ ಸಿಪಿಐ ಮಂಜುನಾಥ್​ ನಾಯ್ಕ ಅವರನ್ನು ಅಮಾನತುಗೊಳಿಸಿ ಐಜಿಪಿ ವಿಕಾಶ್​ ಕುಮಾರ್​ ವಿಕಾಶ್​ ಆದೇಶ ಹೊರಡಿಸಿದ್ದಾರೆ.

ಸಿ.ಟಿ.ರವಿ ಅವರನ್ನು ಖಾನಾಪುರ ಠಾಣೆಗೆ ಕರೆತಂದ ಕರ್ತವ್ಯಲೋಪ, ನಿಷ್ಕಾಳಜಿ, ಬೇಜವಾಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾದಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯವಹಿಸಿದ ಆರೋಪವಿದೆ. ಈ ಅವಧಿಯಲ್ಲಿ ಬಿಜೆಪಿ ನಾಯಕರು ಸೇರಿ ಎಲ್ಲರನ್ನೂ ಠಾಣೆಯ ಒಳಗಡೆ ಬಿಟ್ಟಿದ್ದರು. ಮೇಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಆರೋಪದಡಿ ಇನ್​ಸ್ಪೆಕ್ಟ‌ರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

ಸಿ.ಟಿ.ರವಿ ಪ್ರಕರಣದಲ್ಲಿ ಖಾನಾಪುರ ಸಿಪಿಐ ಮಂಜುನಾಥ್​ ನಾಯ್ಕ ಅವರನ್ನು ಅಮಾನತು ಮಾಡಿರುವ ಕ್ರಮ ಖಂಡಿಸಿ ನಾಳೆ ಖಾನಾಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್​ಗೆ ಬಿಜೆಪಿ ಸಹ ಬೆಂಬಲ ನೀಡಿದೆ.

ಗೃಹ ಸಚಿವರ ಪ್ರತಿಕ್ರಿಯೆ: ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​, "ಪೊಲೀಸ್ ಇಲಾಖೆಯ ಇಲ್ಲಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ನಾವು ಯಾವುದೇ ನಿರ್ದೇಶನ, ಸೂಚನೆ ಕೊಡುವುದಿಲ್ಲ" ಎಂದರು.

"ನಿರ್ದಿಷ್ಟವಾಗಿ ಅವರನ್ನು ಅಮಾನತು ಮಾಡಲು ಏನು ಕಾರಣ, ಸಿ.ಟಿ.ರವಿ ನೀಡಿದ ದೂರು ಎಲ್ಲವನ್ನೂ ಸಿಐಡಿಗೆ ಹಸ್ತಾಂತರಿಸಿದ್ದೇವೆ. ಈಗಾಗಲೇ ಸಿಐಡಿ ತನಿಖೆಗೆ ನಾವು ಆದೇಶ ಕೊಟ್ಟಿದ್ದೇವೆ. ಗೃಹಸಚಿವನಾಗಿ ಆ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಗಳ ಹೇಳಿಕೆ ಕೊಡುವುದಿಲ್ಲ" ಎಂದರು.

"ಡಿ.26 ಹಾಗೂ 27ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಯುತ್ತದೆ. ಆ ಕಾರ್ಯಕ್ರಮಕ್ಕೆ ಯಾವ ರೀತಿ ಭದ್ರತೆ, ಶಿಷ್ಟಾಚಾರ ಪಾಲಿಸಬೇಕು ಎಂದು ಸಭೆ ಮಾಡಿದ್ದೇನೆ. ಅಧಿವೇಶನ ಸಂದರ್ಭದಲ್ಲಿ ಬಂದ ಸುಮಾರು ನಾಲ್ಕೂವರೆ ಸಾವಿರ ಪೊಲೀಸರನ್ನು ಇರಿಸಿಕೊಂಡಿದ್ದೇವೆ. ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ 26 ಜನರನ್ನು ಅಂದೇ ಪೊಲೀಸರು ಬಂಧಿಸಿ ಸಂಜೆಯವರೆಗೂ ಅವರನ್ನು ಇಟ್ಟುಕೊಂಡು ವಾರ್ನಿಂಗ್ ಮಾಡಿ ತಮ್ಮ ಕ್ರಮ ಕೈಗೊಂಡಿದ್ದಾರೆ. ಈಗ ಎರಡೂ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಿದ್ದೇವೆ" ಎಂದರು.

"ಇಂದಿನ ಸಭೆಯಲ್ಲಿ ಸಿ.ಟಿ.ರವಿ ಪ್ರಕರಣ ಕುರಿತು ಯಾವುದೇ ಚರ್ಚೆ ಆಗಿಲ್ಲ. ಕೇವಲ ಕಾಂಗ್ರೆಸ್ ಅಧಿವೇಶನ ಭದ್ರತೆ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕರೆಯಿಸಿ ಯಾರೆಲ್ಲಾ ಬರ್ತಾರೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದೇವೆ. ಈಗಾಗಲೇ ಮೂರು ವಿಶೇಷ ವಿಮಾನಗಳು ಬರುತ್ತಿವೆ. ಪ್ರತಿಯೊಬ್ಬರನ್ನೂ ಸ್ವಾಗತಿಸಲು ಒಬ್ಬೊಬ್ಬರನ್ನು ಅಸೈನ್ ಮಾಡಿದ್ದೇವೆ" ಎಂದರು.

ಇದನ್ನೂ ಓದಿ: ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಕೇಸ್ ಸಿಐಡಿಗೆ ವರ್ಗಾವಣೆ

Last Updated : Dec 25, 2024, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.