ಬೆಂಗಳೂರು :ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ನೀರಿನ ಸಮಸ್ಯೆೆಯ ಬಿಸಿ ತಟ್ಟಿತ್ತು. ಈ ಸಮಸ್ಯೆೆ ತಾಗಬಾರದು ಎಂದು ದಶಕಗಳ ಹಿಂದೆಯೇ ಮಳೆನೀರು ಕೊಯ್ಲನ್ನು ಕಡ್ಡಾಯಗೊಳಿಸಿದ್ದರೂ, ಅನೇಕರು ಇದನ್ನು ಅಳವಡಿಸಿಕೊಂಡಿಲ್ಲ. ಕೊಯ್ಲು ಅಳವಡಿಸಿಕೊಳ್ಳದ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿದ ಜಲಮಂಡಳಿ ಐದು ಸಾವಿರಕ್ಕೂ ಹೆಚ್ಚು ಕಟ್ಟಡಗಳ ಸಂಪರ್ಕ ರದ್ದುಗೊಳಿಸುವ ಮೂಲಕ ಎಚ್ಚರಿಕೆ ನೀಡಿದೆ.
ನಗರದಲ್ಲಿ ಈ ಹಿಂದೆಂದೂ ಕಂಡಿರದಂತೆ ನೀರಿನ ಕೊರತೆ ಈ ಬಾರಿ ಬೇಸಿಗೆಯಲ್ಲಿ ಜನರನ್ನು ಕಾಡಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಸಮರ್ಪಕವಾಗಿ ನೀರಿನ ಸೌಕರ್ಯ ದೊರೆತಿರಲಿಲ್ಲ. ನಗರದ ಕೊಳವೆ ಬಾವಿಗಳೂ ಕೈಕೊಟ್ಟ ಬೆನ್ನಲ್ಲೇ ಮುಂದಿನ ಬೇಸಿಗೆಯಲ್ಲಿ ಈ ರೀತಿ ಜನರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಉದ್ದೇಶದಿಂದ ಜಲಮಂಡಳಿಯು ಮಳೆ ನೀರು ಕೊಯ್ಲನ್ನು ಇನ್ನಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ಅಲ್ಲದೇ, ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕರಿಗೆ ಮಳೆ ನೀರು ಕೊಯ್ಲು ವ್ಯವಸ್ಥೆೆ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದೆ.
ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎನ್ನುವ ಸೂಚನೆಯನ್ನು ವರ್ಷಗಳಿಂದ ಜಲಮಂಡಳಿ ನೀಡುತ್ತಿದ್ದರೂ, ಅನೇಕರು ಈ ಬಗ್ಗೆೆ ಗಮನಹರಿಸಿಲ್ಲ. ಆದ್ದರಿಂದ ಬೆಂಗಳೂರಿನಾದ್ಯಂತ ಸಮೀಕ್ಷೆೆ ನಡೆಸಿರುವ ಜಲಮಂಡಳಿ ಅಕ್ರಮವಾಗಿ ನೀರು ಹರಿಸುತ್ತಿರುವ ಕಟ್ಟಡಗಳ ಸಂಪರ್ಕವನ್ನು ರದ್ದುಗೊಳಿಸಿದೆ.
ಜಲಮಂಡಳಿ ವತಿಯಿಂದ ಕಟ್ಟಡಗಳ ಸಮೀಕ್ಷೆೆ ನಡೆಸಿದ್ದು, ಜಲಮಂಡಳಿ ಮಾರ್ಗಸೂಚಿ ಪ್ರಕಾರ, ಈ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಇರಬೇಕಿತ್ತು. ಆದರೆ, ಇದರಲ್ಲಿ ಕೇವಲ 8404 ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಸಮರ್ಪಕವಾಗಿ ಜಾರಿಯಾಗಿದೆ. ಇನ್ನುಳಿದ 7091 ಕಟ್ಟಡಗಳಿಗೆ ನೋಟಿಸ್ ನೀಡಿದ್ದು, ನಿಯಮ ಬಾಹಿರ ಆಗಿರುವ 5063 ಕಟ್ಟಡಗಳ ಸಂಪರ್ಕವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 60X40 ಅಳತೆ ಮತ್ತು ಅದಕ್ಕೂ ಹೆಚ್ಚಿನ ಅಳತೆಯ ಸೈಟ್‌ನಲ್ಲಿ ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ಕಡ್ಡಾಯವಾಗಿರಬೇಕು ಎಂದು 2016 ರಲ್ಲಿಯೇ ಜಲಮಂಡಳಿ ಆದೇಶ ಹೊರಡಿಸಿದೆ. ಸದ್ಯಕ್ಕೆೆ ಈ ಕ್ರಮವನ್ನು ಅಳವಡಿಸಿಕೊಳ್ಳುವಂತೆ ಜನರ ಮನವೊಲಿಸುವ ಕಾರ್ಯ ನಡೆಯುತ್ತಿದ್ದು, ಜನರು ಅಳವಡಿಕೆ ಮಾಡಲಿಲ್ಲವಾದರೆ ಮುಂದಿನ ಕ್ರಮದ ಕುರಿತು ಚಿಂತನೆ ನಡೆಸಲಾಗುವುದು ಎಂದಿದ್ದಾರೆ.
ಮಳೆ ಕೊಯ್ಲು ವ್ಯವಸ್ಥೆೆಯನ್ನು ಅಳವಡಿಸಿಕೊಳ್ಳಲು ಸರಿ ಸುಮಾರು 3000 ರೂಪಾಯಿ ಖರ್ಚಾಗುತ್ತಿದ್ದು, ಹಣಕಾಸಿನ ಸಹಾಯದ ಬಗ್ಗೆೆ ಜಲಮಂಡಳಿ ಯಾವುದೇ ರೀತಿಯ ಚಿಂತನೆ ನಡೆಸಿಲ್ಲ. ಆದರೆ, ಈ ವ್ಯವಸ್ಥೆೆಯನ್ನು ಅಳವಡಿಸಿಕೊಳ್ಳಲು ಮುಂದಾಗುವವರಿಗೆ ಅಗತ್ಯಬಿದ್ದರೆ ಜಲಮಂಡಳಿ ತಾಂತ್ರಿಕ ಸಹಾಯವನ್ನು ನೀಡಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಇದನ್ನೂ ಓದಿ :ಜಲಮಂಡಳಿ ವತಿಯಿಂದ ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್: ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ - Rainwater Harvesting