ತುಮಕೂರು:ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ನಿವಾಸಿ ಸೈಯದ್ ಪರಾರಿಯಾದ ಆರೋಪಿ. ಸಿಆರ್ ನಂ. 13/2024ರ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು.
ತುಮಕೂರು: ಪೊಲೀಸ್ ಠಾಣೆಯಿಂದ ಕಳ್ಳತನ ಪ್ರಕರಣದ ಆರೋಪಿ ಪರಾರಿ - ತುಮಕೂರು
ಗುಬ್ಬಿ ಪೊಲೀಸ್ ಠಾಣೆಯಿಂದ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಪರಾರಿಯಾಗಿದ್ದಾನೆ.
ಪೊಲೀಸ್ ಠಾಣೆಯಿಂದ ಆರೋಪಿ ಪರಾರಿ
Published : Feb 2, 2024, 12:45 PM IST
ಸೈಯದ್‌ನನ್ನು ಬೆಂಗಳೂರಿನಲ್ಲಿ ಬಂಧಿಸಿ ಗುಬ್ಬಿ ಠಾಣೆಗೆ ಕರೆತರಲಾಗಿತ್ತು. ಇಂದು ಬೆಳಿಗ್ಗೆ 4.30ರ ಸುಮಾರಿಗೆ ಠಾಣೆಯಿಂದ ಪರಾರಿಯಾಗಿದ್ದಾನೆ. ಆರೋಪಿಯ ಎಡಗೈ ಮೇಲೆ ಸಿರಿಗನ್ನಡಂ, ಬಲಗೈ ಮೇಲೆ ಎಲ್ಲಾ ಧರ್ಮದ ಹಚ್ಚೆ ಇದೆ. ಡ್ಯಾನ್ಸ್ ಕೊರಿಯಾಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸ್ನೇಹಿತನ ಸವಾಲು ಸ್ವೀಕರಿಸಿ ಹೋಟೆಲ್‌ನಲ್ಲಿ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ್ದ ಆರೋಪಿ ಅರೆಸ್ಟ್