ಕಲಬುರಗಿ:ಮಹಾನಗರ ಪಾಲಿಕೆಯ ಚೆಕ್ಗಳ ಮೇಲೆ ಆಯುಕ್ತರ ಸಹಿ ನಕಲು ಮಾಡಿ 36 ಲಕ್ಷ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರ ಆಪ್ತ ಸಹಾಯಕ (ಪಿಎ) ಸೇರಿ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಢಗೆ ಅವರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಲಿಕೆ ಪ್ರಥಮ ದರ್ಜೆ ಸಹಾಯಕ ಮೊಹಮ್ಮದ್ ನಯಿಮೂದೀನ್, ವಾಜಿದ್ ಇಮ್ರಾನ್, ಮಿರ್ಜಾ ಆರೀಪ್ ಬೇಗ್, ನಸೀರ್ ಅಹ್ಮದ್, ಮೊಹಮ್ಮದ್ ಅಬ್ದುಲ್ ರೆಹಮಾನ್ ಬಂಧಿತ ಆರೋಪಿಗಳು. ಬಂಧಿತರಲ್ಲಿ ನಯಿಮೂದೀನ್ ಎಂಬಾತ ಪಾಲಿಕೆ ಆಯುಕ್ತರ ಆಪ್ತ ಸಹಾಯಕನಾಗಿದ್ದು, ಇಬ್ಬರು ಪಾಲಿಕೆ ಸಿಬ್ಬಂದಿ ಎಂದಿದ್ದಾರೆ.
ಕಾರ್ಪೋರೇಷನ್ ಕಮಿಷನರ್ ಪಿಎ ನಯಿಮೂದೀನ್ಗೆ ತಾನು ಮಾಡಿದ ಬ್ಯಾಂಕ್ ಸಾಲ ತೀರಿಸಲಾಗದೆ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಪ್ಲ್ಯಾನ್ ಮಾಡಿದ್ದಾನೆ. ನಂತರ ಏರ್ಟೆಲ್ನ 5 ಡಿಡಿಗಳನ್ನ ಕಲೆಟ್ಟ್ ಮಾಡಿಕೊಂಡಿದ್ದ. ಕಾರ್ಪೋರೇಷನ್ನಲ್ಲಿ ರೆಗ್ಯುಲರ್ ಅಕೌಂಟ್ ಇದೆ. ಅದಕ್ಕೆ ಡಿಡಿಯನ್ನ ಡಿಪೋಸಿಟ್ ಮಾಡಬೇಕು. ಆದರೆ ಅಲ್ಲಿರುವ ರೆಗ್ಯುಲರ್ ಆಗಿ ಬಳಕೆ ಮಾಡದ ವಾಟರ್ ಸಪ್ಲೈ ಅಕೌಂಟ್ಗೆ 1.65 ಕೋಟಿ ವರ್ಗಾವಣೆ ಮಾಡುತ್ತಾರೆ. ಈ ಮೂಲಕ ನಕಲಿ ಸಹಿ ಮಾಡಿ ಹಣವನ್ನ ವಿಥ್ ಡ್ರಾ ಮಾಡಿ ಶೇರ್ ಮಾಡುವುದು ಇವರ ಉದ್ದೇಶವಾಗಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.