ಕರ್ನಾಟಕ

karnataka

ETV Bharat / state

ಗಂಡನ ಬಿಟ್ಟು ಬಂದವಳ ಜೊತೆ ಪ್ರೀತಿ, ಅನ್ಯಪುರುಷನ ಜೊತೆ ಸಂಬಂಧ ಶಂಕೆ; ಮಹಿಳೆಯ ಕೊಲೆ - Lover Murder - LOVER MURDER

ಗಂಡನ ಬಿಟ್ಟು ಬಂದವಳ ಜೊತೆ ಯುವಕನೊಬ್ಬ ಪ್ರೀತಿ ಮಾಡುತ್ತಿದ್ದನು. ಅನ್ಯಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಸಂಶಯ ಪಟ್ಟ ಆ ಯುವಕ ತಾನು ಪ್ರೀತಿ ಮಾಡಿದ ಮಹಿಳೆಯನ್ನೇ ಹತ್ಯೆ ಮಾಡಿ ಆತ್ಮಹತ್ಯೆ ನಾಟಕವಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

YOUNG MAN KILLED  BENGALURU CRIME NEWS  BENGALURU  WOMAN LEFT HUSBAND
ಮಹಿಳೆಯ ಕೊಲೆ (ETV Bharat)

By ETV Bharat Karnataka Team

Published : Jun 25, 2024, 5:43 PM IST

ಹೊಸಕೋಟೆ (ಬೆಂಗಳೂರು ಗ್ರಾಮಾಂತರ):ಆ ಮಹಿಳೆಗೆ ಆರು ತಿಂಗಳ ಹಿಂದೆ ಮದುವೆಯಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಆಕೆ ತನ್ನ ಗಂಡನನ್ನು ಬಿಟ್ಟು ಬಂದಿದ್ದಳು. ಆಕೆಯ ಜೊತೆ ಯುವಕನೊಬ್ಬ ಪ್ರೀತಿಯ ಬಲೆಗೆ ಬಿದ್ದಿದ್ದನು. ಆದ್ರೆ ಅವಳು ಅನ್ಯಪುರುಷನ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂಬ ಸಂಶಯ ಪಟ್ಟ ಯುವಕ ತಾನು ಪ್ರೀತಿಸಿದ್ದ ಮಹಿಳೆಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ಬೆಚ್ಚಿ ಬೀಳಿಸಿದೆ.

ಹೊಸಕೋಟೆ ನಗರದ ಕಾಲೇಜ್ ರಸ್ತೆಯಲ್ಲಿ ಈ ಕೊಲೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಹೇಮಾವತಿ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೇಣುನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕೊಲೆಯಾದ ಮಹಿಳೆ ಹೇಮಾವತಿ ಮದುವೆಯಾದ 6 ತಿಂಗಳಿಗೆ ಗಂಡನನ್ನು ಬಿಟ್ಟು ಬಂದಿದ್ದಳು. ಆರೋಪಿ ವೇಣು ಕಳೆದ ಕೆಲವು ವರ್ಷಗಳಿಂದ ಆಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಬೇರೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿದ್ದಾಳೆಂಬ ಸಂಶಯ ವೇಣುಗೆ ಕಾಡುತ್ತಿತ್ತು. ಇದೇ ಅವೇಶದಲ್ಲಿ ಅವಳ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಮಾಡಿ ಪರಾರಿಯಾಗುವ ಮುನ್ನ ಮಾವನಿಗೆ ಫೋನ್ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಾಗ ವಿಷಯ ಬೆಳಕಿಗೆ ಬಂದಿದೆ.

ಇನ್ನು, ಮಹಿಳೆಯನ್ನು ಕೊಲೆ ಮಾಡಿರುವ ಸ್ಥಳದ ಮಾಹಿತಿ ನೀಡಿರಲಿಲ್ಲ. ಹೊಸಕೋಟೆ ಪೊಲೀಸ್ ಇನ್ಸ್​ಪೆಕ್ಟರ್ ಅಶೋಕ್ ನೇತೃತ್ವದಲ್ಲಿ ಸತತ 4 ಗಂಟೆಗಳ ಕಾಲ ಹುಡುಕಾಟ ನಡೆಸಿ ಮೃತದೇಹ ಪತ್ತೆ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ವೇಣುನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಬಂಧಿಸಿದ್ದಾರೆ.

ಓದಿ:ತಮಿಳುನಾಡು ಕಳ್ಳಭಟ್ಟಿ ದುರಂತ: 28 ಮಕ್ಕಳಿಗೆ ತಂದೆ ಇಲ್ಲವೇ ತಾಯಿ ಇಲ್ಲ; ಸಂಪೂರ್ಣ ವೆಚ್ಚ ಭರಿಸಲು ಮುಂದಾದ ಸರ್ಕಾರ - Kallakurichi Hooch Tragedy

ABOUT THE AUTHOR

...view details