ಹಾವೇರಿ:ಇಲ್ಲಿನಬಸವೇಶ್ವರ ನಗರದ ಭಾವನಾ ಶಿವಾನಂದ್ ಎಂಬುವರು ಆಸ್ಟ್ರೇಲಿಯಾದಿಂದ ಬಂದು ವೋಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ನಗರದ ಲಯನ್ಸ್ ಸ್ಕೋಲ್‌ನ ಮತಗಟ್ಟೆ ಸಂಖ್ಯೆ 217 ರಲ್ಲಿ ಮತ ಚಲಾಯಿಸಿದರು. ಮೂಲತಃ ಶಿವಮೊಗ್ಗದವರಾದ ಇವರು ಹಾವೇರಿ ವರನನ್ನು ಮದುವೆಯಾಗಿದ್ದಾರೆ. ಈ ಹಿಂದೆ ಸಿಂಗಾಪುರದಿಂದ ಇವರು ಆಗಮಿಸಿ ಮತದಾನ ಮಾಡಿದ್ದರು. ಈಗ ಆಸ್ಟ್ರೇಲಿಯಾದ ಸಿಡ್ನಿಯಿಂದ ಮತಹಕ್ಕು ಚಲಾಯಿಸಿದ್ದಾರೆ.
ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆಸ್ಟ್ರೇಲಿಯಾ ಪೌರತ್ವ ಪಡೆದುಕೊಂಡಿಲ್ಲ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆಯಾಗುತ್ತೆ. ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ನೀವೂ ಚಲಾಯಿಸಿ, ಚುನಾವಣೆಯಲ್ಲಿ ಮತದಾನ ಮಾಡಲು ರಜೆ ನೀಡುತ್ತಾರೆ ಎಂದು ಪಿಕ್ನಿಕ್ ಅಂತಾ ಮಜಾ ಮಾಡಲು ಹೋಗುತ್ತಾರೆ. ಮೊದಲು ಮತ ಹಾಕಿ ಆಮೇಲೆ ನೀವು ರಜೆಯನ್ನು ಸಂತಸದಿಂದ ಕಳೆಯಬಹುದು ಎಂದು ಹೇಳಿದರು.
ಬ್ರಿಟನ್ನಿಂದ ಬಂದು ಮತ ಚಲಾಯಿಸಿದ ಮಹಿಳೆ(ಉತ್ತರ ಕನ್ನಡ):ಮತ್ತೊಂದೆಡೆ, ಕಾರವಾರದಲ್ಲಿ ಮಹಿಳೆಯೊಬ್ಬರು ಬ್ರಿಟನ್‌ದಿಂದ ಆಗಮಿಸಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಮನೆ ಗ್ರಾಮದ ಸುಜಾತಾ ಗಾಂವ್ಕರ್ ಬ್ರಿಟನ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಮತದಾನ ಇರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿ ಮಾವಿನ ಮನೆ ಗ್ರಾಮದ ಬಾಸಲ ಮತಗಟ್ಟೆಯಲ್ಲಿ ವೋಟ್ ಹಾಕಿದ್ದಾರೆ.