ಶಿವಮೊಗ್ಗ:ಕಾಡಿಗೆ ತರಗೆಲೆಯನ್ನು ತರಲು ಹೋಗಿದ್ದ ವ್ಯಕ್ತಿಯನ್ನು ಕಾಡಾನೆಯೊಂದು ತುಳಿದು ಸಾಯಿಸಿರುವ ಘಟನೆ ಹೊಸನಗರದ ರಿಪ್ಪನಪೇಟೆ ಬಳಿಯ ಬಸವಾಪುರ ಗ್ರಾಮದಲ್ಲಿ ನಡೆದಿದೆ. ಬಸಾವಪುರ ಗ್ರಾಮದ ತಿಮ್ಮಪ್ಪ (58) ಸಾವನ್ನಪ್ಪಿದ ವ್ಯಕ್ತಿ.
ತಿಮ್ಮಪ್ಪ ಇಂದು ಬೆಳಗ್ಗೆ ಕಾಡಿಗೆ ತರಗೆಲೆ ತರಲು ಹೋಗಿದ್ದರು. ಈ ವೇಳೆ, ಕಾಡಾನೆ ಅವರನ್ನು ತುಳಿದು ಹಾಕಿದೆ. ಸ್ವಲ್ಪ ದೂರದಲ್ಲಿ ತರಗೆಲೆ ಗೂಡಿಸುತ್ತಿದ್ದ ಮಹಿಳೆಯರು ತಿಮ್ಮಪ್ಪನ ಶವವನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ತೆರಳಿ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.