ದಾವಣಗೆರೆ:ಬಾರ್ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ವ್ಯಕ್ತಿಗೆ ಮನಸೋ ಇಚ್ಛೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಿಟ್ಟುವಳ್ಳಿ ರಸ್ತೆಯ ಕೆಟಿಜೆ ನಗರದ ಬಾರ್ವೊಂದರಲ್ಲಿ ನಡೆದಿದೆ. ಕುಮಾರ್ ( 36) ಮೃತ ವ್ಯಕ್ತಿ. ಘಟನೆ ಸಂಬಂಧ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ನಿಟ್ಟುವಳಿ ಹೊಸ ಬಡಾವಣೆ ನಿವಾಸಿ ಗೌತಮ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಕುಮಾರ್ ಸ್ನೇಹಿತರೊಂದಿಗೆ ಬಾರ್ನಲ್ಲಿ ಕುಳಿತು ಮದ್ಯ ಸೇವಿಸುತ್ತಿದಾಗ ಏಕಾಏಕಿ ಬಂದ ಗೌತಮ್ ಮನಸೋ ಇಚ್ಛೆ ಚಾಕು ಇರಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಾಕು ಇರಿತಕ್ಕೊಳಗಾದ ಕುಮಾರ್ ಮೃತಪಟ್ಟಿದ್ದಾರೆ. ಕೃತ್ಯದ ಸಂಪೂರ್ಣ ದೃಶ್ಯ ಬಾರ್ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.