ಆನೇಕಲ್(ಬೆಂಗಳೂರು): ತಾಯಿಯೊಂದಿಗೆ ವ್ಯಕ್ತಿಯೋರ್ವ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಕೋಪಗೊಂಡ ಮಗ ಆತನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ 9.30ರ ಸುಮಾರಿಗೆ ಕೂಡ್ಲು ಗ್ರಾಮದ ಸಾಯಿ ಮೆಡೋಸ್ ಲೇಔಟ್ನ ಸುಭಾಷ್ ಚಂದ್ರ ಬೋಸ್ ರಸ್ತೆಯಲ್ಲಿರುವ ಲೋಕನಾಥ ಎಂಬುವರ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಲೆ ನಡೆದಿದೆ. 37 ವರ್ಷದ ಕೃಷ್ಣೋಜಿರಾವ್ ಕೊಲೆಯಾದ ಕಟ್ಟಡ ಕಾರ್ಮಿಕ.
ಕೃಷ್ಣೋಜಿರಾವ್ ಅವರೊಂದಿಗೆ ರಾಜೇಶ್ವರಿ ಎಂಬವರು ನಿರ್ಮಾಣ ಹಂತದ ಮೊದಲ ಮಹಡಿಯಲ್ಲಿ ವಾಸವಿದ್ದರು. ಶನಿವಾರ ಕೃಷ್ಣೋಜಿರಾವ್ಗೆ ಕೂಲಿ ಹಣ ಬಂದಿತ್ತು. ಈ ವಿಷಯಕ್ಕೆ ರಾಜೇಶ್ವರಿ ಮತ್ತು ಕೃಷ್ಣೋಜಿರಾವ್ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ನಡೆಯುತ್ತಿದ್ದಾಗ ರಾಜೇಶ್ವರಿ ಅವರ ಮಗ ಶಿವಕುಮಾರ್ ಸ್ಥಳಕ್ಕೆ ಬಂದಿದ್ದಾನೆ. ಈ ವೇಳೆ ತಾಯಿಯ ಮೇಲೆ ಹಲ್ಲೆ ಮಾಡಿರುವುದನ್ನು ಕಂಡಿದ್ದಾನೆ. ಇದರಿಂದ ಕೋಪಗೊಂಡ ಶಿವಕುಮಾರ್ ದೊಣ್ಣೆಯಿಂದ ಹೊಡೆದು ಕೃಷ್ಣೋಜಿರಾವ್‌ನನ್ನು ಕೊಲೆ ಮಾಡಿದ್ದಾನೆ ಎಂದು ಕಟ್ಟಡದ ಮಾಲೀಕ ಸುರೇಶ್ ಆರೋಪಿಸಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ವಿಶೇಷ ಪ್ರಾಸಿಕ್ಯೂಟರ್ ನೇಮಿಸಿದ ಸರ್ಕಾರ - Special Prosecutor Appointed