ಬೆಂಗಳೂರು:85 ಸಾವಿರ ರೂಪಾಯಿ ಹಣದ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿ ಸ್ನೇಹಿತನ ಹತ್ಯೆಗೈದ ಘಟನೆ ನೆಲಮಂಗಲದ ಮಹಿಮಾಪುರದ ಕಾರ್ಮಿಕರ ಶೆಡ್ ಶನಿವಾರ ನಡೆದಿದೆ. ರಾಜೀವ್ ಗಾಂಧಿ ಪೆರುಮಾಳ್ (40) ಕೊಲೆಯಾದವರು. ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೀವ್ ಗಾಂಧಿ ಪೆರುಮಾಳ್ ಮತ್ತು ಆರೋಪಿ ಇಬ್ಬರೂ ತಮಿಳುನಾಡಿನ ಸೇಲಂನವರು. ಸ್ನೇಹಿತರಾಗಿದ್ದ ಇವರು ಒಂದೇ ರೂಂನಲ್ಲಿ ವಾಸವಾಗಿದ್ದರು. ಆದರೆ ಹಣದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಕೋಪದಲ್ಲಿ ಆರೋಪಿ ದೊಣ್ಣೆಯಿಂದ ರಾಜೀವ್ ಗಾಂಧಿ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ರಾಜೀವ್ ಗಾಂಧಿಯನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.