ಕರ್ನಾಟಕ

karnataka

ETV Bharat / state

ದಾವಣಗೆರೆ: ಸಾಂಬಾರ್‌ ಮೈಮೇಲೆ ಬಿದ್ದು ಗಾಯಗೊಂಡ ಬಾಲಕ ಸಾವು - Sambar Fell On Boy - SAMBAR FELL ON BOY

ಸಾಂಬಾರ್ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ದಾವಣಗೆರೆಯ ಗೊಲ್ಲರಹಟ್ಟಿ ಗ್ರಾಮದ ನಾಲ್ಕು ವರ್ಷದ ಬಾಲಕ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 29, 2024, 12:35 PM IST

ದಾವಣಗೆರೆ: ಮೈಮೇಲೆ ಸಾಂಬಾರ್‌ ಬಿದ್ದು ಗಾಯಗೊಂಡಿದ್ದ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾನೆ. ಜಿಲ್ಲೆಯ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಶ್ರೀನಿವಾಸ್‌ ಅವರ ಪುತ್ರ ಮಿಥುನ್‌ (4) ಮೃತ ಬಾಲಕ.

"ಬಾಲಕನ ಮೇಲೆ ಸೆ.15ರಂದು ಬಿಸಿ ಸಾಂಬಾರ್ ಬಿದ್ದಿತ್ತು‌. ತಕ್ಷಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸೆ.26ರಂದು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ" ಎಂದು ಜಗಳೂರು ಠಾಣೆಯ ಸಿಪಿಐ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

"ಅಡುಗೆ ಮನೆಯ ಕಟ್ಟೆಯ ಮೇಲಿಟ್ಟಿದ್ದ ಬಿಸಿ ಸಾಂಬಾರ್‌ ಪಾತ್ರೆಯನ್ನು ಬಾಲಕ ಎಳೆದಿದ್ದಾನೆ. ಈ ವೇಳೆ ಅದು ಮೈಮೇಲೆ ಬಿದ್ದು ಎದೆ, ಕಾಲುಗಳು ಸೇರಿದಂತೆ ದೇಹದ ಭಾಗಗಳು ಸುಟ್ಟಿದ್ದವು" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಪೆನ್​ ವಿಚಾರಕ್ಕಾಗಿ ಸ್ನೇಹಿತನಿಗೆ ಚಾಕು ಇರಿದ 7ನೇ ತರಗತಿ ವಿದ್ಯಾರ್ಥಿ! - 7TH CLASS STUDENT STABS

ABOUT THE AUTHOR

...view details