ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಝಿಕಾ ವೈರಸ್ ಸೋಂಕಿತ ವೃದ್ಧ ಸಾವು: ಡಿಹೆಚ್​​ಓ ಸ್ಪಷ್ಟನೆ ಹೀಗಿದೆ - Man Died by Zika virus - MAN DIED BY ZIKA VIRUS

ಶಿವಮೊಗ್ಗದಲ್ಲಿ ಝಿಕಾ ವೈರಸ್​​ ಮತ್ತು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ ವೃದ್ಧ ಮೃತಪಟ್ಟಿದ್ದಾರೆ.

Zika virus case
ಝಿಕಾ ವೈರಸ್​​ಗೆ ವ್ಯಕ್ತಿ ಬಲಿ! (ಸಾಂದರ್ಭಿಕ ಚಿತ್ರ)

By ETV Bharat Karnataka Team

Published : Jul 6, 2024, 11:28 AM IST

ಶಿವಮೊಗ್ಗ: ಡೆಂಗ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಝಿಕಾ ವೈರಸ್​ ಭೀತಿ ಹುಟ್ಟಿಸಿದೆ. ಶಿವಮೊಗ್ಗದಲ್ಲಿ ಝಿಕಾ ವೈರಸ್​ ಸೋಂಕಿತ 74 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಇದು ಝಿಕಾಗೆ ಬಲಿಯಾದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.

ಮೃತ ವೃದ್ಧ ಝಿಕಾ ವೈರಸ್ ಸೇರಿದಂತೆ ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಗಾಂಧಿ ನಗರದ ನಿವಾಸಿ ವೆಂಕಟಾಚಲಪತಿ ಅವರು ಕಳೆದ ಹತ್ತು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಾಗಿದ್ದರು. ಶೀತ, ಜ್ವರ, ಕೆಮ್ಮು ಲಕ್ಷಣವಿದ್ದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಝಿಕಾ ವೈರಸ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದ್ದಾರೆ.

ಕೇವಲ ಝಿಕಾ ವೈರಸ್​ಗೆ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ಅವರು ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಸಾವನ್ನಪ್ಪಿದ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ ಎಂದು ಶಿವಮೊಗ್ಗ ಡಿಹೆಚ್​​ಓ ನಟರಾಜ್ ದೂರವಾಣಿ ಮೂಲಕ ಈಟಿವಿ ಭಾರತ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು ನಾಗರಿಕರು, ವಿದ್ಯಾರ್ಥಿಗಳಿಗೆ ಪಾಲಿಕೆಯಿಂದ 'ಡೆಂಗ್ಯೂ ವಾರಿಯರ್ಸ್ ಸ್ಪರ್ಧೆ' - Dengue Warriors Competition

ABOUT THE AUTHOR

...view details