ಕರ್ನಾಟಕ

karnataka

ETV Bharat / state

ಸಮಾಜವನ್ನು ಪಾಸಿಟಿವ್ ಸೈಕಾಲಜಿ ಸೊಸೈಟಿಯಾಗಿ ಬದಲಾಯಿಸುವುದು ನನ್ನಾಸೆ: ಕಲಾ ವಿಭಾಗದ ಟಾಪರ್ ಮೇಧಾ - PUC Arts Topper - PUC ARTS TOPPER

ಸೈಕಾಲಜಿಯನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪಾಸಿಟಿವ್ ಸೈಕಾಲಜಿ ಸೊಸೈಟಿಯಾಗಿ ಬದಲಾಯಿಸುವುದು ನನ್ನ ಗುರಿ ಎಂದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಮೇಧಾ ಹೇಳಿದ್ದಾರೆ.

2nd-puc-arts-state-topper-medha-reaction-on-result
ಸಮಾಜವನ್ನು ಪಾಸಿಟಿವ್ ಸೈಕಾಲಜಿ ಸೊಸೈಟಿಯಾಗಿ ಬದಲಾಯಿಸುವುದು ನನ್ನ ಆಸೆ: ಕಲಾ ವಿಭಾಗದ ಟಾಪರ್ ಮೇಧಾ

By ETV Bharat Karnataka Team

Published : Apr 10, 2024, 5:43 PM IST

ಬೆಂಗಳೂರು: ಆರ್ಟ್ಸ್ ಸೊಸೈಟಿಗೆ ಹತ್ತಿವಿರುವ ವಿಷಯ. ಮುಂದೆ ಸೈಕಾಲಜಿಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು ಪಾಸಿಟಿವ್ ಸೈಕಾಲಜಿ ಸೊಸೈಟಿಯಾಗಿ ಬದಲಾಯಿಸುವುದು ನನ್ನ ಗುರಿಯಾಗಿದೆ. ನಂತರ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆಯಿದೆ​ ಎಂದು ದ್ವಿತೀಯ ಪಿಯು ಕಲಾ ವಿಭಾಗದ ಟಾಪರ್​ ಮೇಧಾ ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.

ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೇಧಾ ಡಿ ಅವರು ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ತುಂಬಾ ಖುಷಿ ಆಗುತ್ತಿದೆ. ನನ್ನ ಸಾಧನೆಗೆ ಪ್ರೇರೇಪಣೆ ನೀಡಿದ ಅಪ್ಪ, ಅಮ್ಮ, ತಾತ, ಅಜ್ಜಿ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. 10ನೇ ತರಗತಿಯಲ್ಲಿ ನಾನು ಟಾಪರ್ ಅಲ್ಲ. ಓಪನ್ ಸ್ಕೂಲಿಂಗ್​ನಲ್ಲಿ ಮೂರೇ ತಿಂಗಳಿಗೆ ಎಸ್ಎಸ್​ಎಲ್​ಸಿ ಕಂಪ್ಲೀಟ್ ಮಾಡಿದ್ದೆ. ಆದರೆ ಪಿಯುಸಿಯಲ್ಲಿ ದಿನಾ ಬೆಳಗ್ಗೆ ಬೇಗ ಎದ್ದು, ಅವತ್ತಿನ ದಿನವೇ ಎಲ್ಲಾ ಓದಿಕೊಳ್ಳುತ್ತಿದೆ. ಸೋಷಿಯಾಲಜಿ, ಇಂಗ್ಲಿಷ್, ಎಕನಾಮಿಕ್ಸ್‌ನಲ್ಲಿ 100ಕ್ಕೆ ನೂರು ಅಂಕ ಬಂದಿಲ್ಲ. ಕಾಲೇಜಿನಲ್ಲಿ ಬೆಂಬಲ, ಮನೆಯವರ ಸ್ಫೂರ್ತಿ ನನ್ನ ಸಾಧನೆಗೆ ಮುಖ್ಯ ಕಾರಣ ಎಂದರು.

ಇದನ್ನೂ ಓದಿ:ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟ - 2nd PUC Exam Schedule

ABOUT THE AUTHOR

...view details