ದಾವಣಗೆರೆ:ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್(ಸಿಇಐಆರ್) ಪೋರ್ಟಲ್ ನೆರವಿನಿಂದ ದಾವಣಗೆರೆ ಪೊಲೀಸರು 3.50 ಲಕ್ಷ ರೂ ಮೌಲ್ಯದ 22 ಮೊಬೈಲ್ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಒಪ್ಪಿಸಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು, ಸುಲಿಗೆ ಹಾಗೂ ಕಳೆದುಕೊಂಡಿರುವ ಮೊಬೈಲ್ಗಳನ್ನು ಹುಡುಕಿಕೊಡುವಂತೆ ವಾರಸುದಾರರು ಸಿಇಐರ್ ವೆಬ್ ಪೋರ್ಟಲ್ನಲ್ಲಿ ನೋಂದಾಯಿಸಿದ್ದರು.
ವಾರಸುದಾರರಿಗೆ ಫೋನ್ ಹಸ್ತಾಂತರಿಸುತ್ತಿರುವ ಡಿವೈಎಸ್ಪಿ ಬಸವರಾಜ್ (ETV Bharat) ಎರಡೇ ತಿಂಗಳಲ್ಲಿ ಪೊಲೀಸರು ವಿವಿಧ ಕಂಪನಿಗಳ ಮೊಬೈಲ್ಗಳನ್ನು ಪತ್ತೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ಡಿವೈಎಸ್ಪಿ ಬಸವರಾಜ್ ಬಿ.ಎಸ್. ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಬೈಲ್ಗಳನ್ನು ವಾರಸುದಾರರಿಗೆ ನೀಡಿದರು.
ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಕಿರಣ್ ಕುಮಾರ್, ಪಿಎಸ್ಐ ಜೋವಿತ್ ರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ದಂಧೆಕೋರರು ಸೆರೆ - Marijuana Sellers Arrest