ಕರ್ನಾಟಕ

karnataka

ಯಾದಗಿರಿ: ಅಕ್ರಮ ಪಡಿತರ ಸಾಗಾಣಿಕೆ, ಅಂದಾಜು 4.70 ಲಕ್ಷ ಮೌಲ್ಯದ ಅಕ್ಕಿ ವಶ - ration rice seized

By ETV Bharat Karnataka Team

Published : Aug 13, 2024, 10:56 AM IST

ಜೇವರ್ಗಿ ಕಡೆಯಿಂದ ಗುರುಮಠಕಲ್​ ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 140 ಕ್ವಿಂಟಾಲ್​​ ಅಕ್ಕಿಯನ್ನು ಭೀಮರಾಯನ ಗುಡಿ ಪೊಲೀಸರು ವಶಕ್ಕೆ ಪಡೆದು ಡ್ರೈವರ್ ಕಂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಪಡಿತರ ಸಾಗಾಣಿಕೆ;4.70 ಲಕ್ಷ ಮೌಲ್ಯದ ಅಕ್ಕಿ ವಶ
ಅಕ್ರಮ ಪಡಿತರ ಸಾಗಾಣಿಕೆ;4.70 ಲಕ್ಷ ಮೌಲ್ಯದ ಅಕ್ಕಿ ವಶ (ETV Bharat)

ಶಹಾಪುರ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಜಂಬಯ್ಯ ಅವರಿಂದ ಮಾಹಿತಿ (ETV Bharat)

ಯಾದಗಿರಿ:ಕಲಬುರಗಿ ಜಿಲ್ಲೆಯ ಜೇವರ್ಗಿ ಕಡೆಯಿಂದ ಗುರುಮಠಕಲ್​ ಕಡೆಗೆ ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 4.70 ಲಕ್ಷ ಮೌಲ್ಯದ ಪಡಿತರ ಅಕ್ಕಿ ಹಾಗೂ ಲಾರಿ ಸಮೇತ ಚಾಲಕನನ್ನು ತಾಲೂಕಿನ ಭೀಮರಾಯನಗುಡಿಯ ಮುಖ್ಯ ಕಾಲುವೆ ಹತ್ತಿರ ಭೀಮರಾಯನ ಗುಡಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ನ್ಯಾಷನಲ್ ಫುಡ್ ಕಾರ್ಪೊರೇಷನ್ ವತಿಯಿಂದ ನ್ಯಾಯಬೆಲೆ ಅಂಗಡಿಗೆ ವಿತರಿಸಲಾಗುವ ಟ್ಯಾಗ್ ಇರುವ ಚೀಲದಲ್ಲಿ ಸುಮಾರು 282 ಪಾಕೆಟ್​ಗಳಲ್ಲಿ ಅಂದಾಜು 140 ಕ್ವಿಂಟಾಲ್​ ಅಕ್ಕಿ ಇದ್ದು, ಅದರ ಅಂದಾಜು ಮೌಲ್ಯ 4.70 ಲಕ್ಷ ರೂ.ಗಳು. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಭೀಮರಾಯನ ಗುಡಿಯ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ಕಡೆಯಿಂದ ರಾಜ್ಯ ಹೆದ್ದಾರಿ ಮೂಲಕ ಗುರುಮಠಕಲ್ ಕಡೆ ಅಕ್ಕಿಯನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಅಕ್ಕಿ ಚೀಲಗಳ ಜೊತೆ ಡ್ರೈವರ್ ಕಂ ಮಾಲೀಕ ರಾಜು ಸೋಮ್ಲೂ ನಾಯಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ನಗರದ ಹೊರವಲಯದಲ್ಲಿರುವ ಕೆ.ಎಫ್.ಸಿ.ಸಿ ಗೋಡೌನಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

"ನೆಮ್ಮದಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನ್ನಭಾಗ್ಯ ಆಸರೆಯಾಗಿತ್ತು. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಯಾರು ತಡೆಯುವವರು ಇಲ್ಲವೆಂಬಂತೆ ನಮ್ಮದೇ ರಾಜ್ಯಬಾರವೆಂದು ಅಕ್ರಮ ಪಡಿತರ ದಂಧೆಕೋರರು ಬಡವರ ಅನ್ನಭಾಗ್ಯಕ್ಕೆ ಕನ್ನ ಹಾಕುತ್ತಿದ್ದಾರೆ. ಇದಕ್ಕೆಲ್ಲ ರಾಜಕೀಯ ನಾಯಕರ ಕೃಪಾಪೋಷಣೆ ಇದೆ" ಎಂದು ದಲಿತ ಸಂಘರ್ಷ ಸಮಿತಿಯ ಮುಖ್ಯಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ:ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಕ್ರಮದ ಕುರಿತು ಪ್ರಮಾಣಪತ್ರ ಸಲ್ಲಿಸಿ: ಹೈಕೋರ್ಟ್ - Fake Caste Certificate

ABOUT THE AUTHOR

...view details