ಕರ್ನಾಟಕ

karnataka

ETV Bharat / sports

ಅತಿ ಕಿರಿಯ ವಯಸ್ಸಲ್ಲಿ ಭಾರತ ಅಂಡರ್​ 19 ಕ್ರಿಕೆಟ್​ ತಂಡ ಸೇರಿದ ಬಿಹಾರದ ಹುಡುಗ! - India U19 Cricket Team - INDIA U19 CRICKET TEAM

ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಕಾಲಿಟ್ಟ ಬಿಹಾರದ ಆಟಗಾರ ಇವರೆನ್ನುವುದು ವಿಶೇಷ.

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ (ETV Bharat)

By ETV Bharat Sports Team

Published : Sep 2, 2024, 2:31 PM IST

ನವದೆಹಲಿ: 13 ವರ್ಷದ ಉದಯೋನ್ಮುಖ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಕ್ರಿಕೆಟ್​ ಪಂದ್ಯಾವಳಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ, ರಣಜಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಇವರು ನಿರ್ಮಿಸಿದ್ದಾರೆ. ಅಲ್ಲದೇ ಸಚಿನ್​ ತೆಂಡೂಲ್ಕರ್​ಗಿಂತಲೂ ಕಿರಿಯ ವಯಸ್ಸಿನಲ್ಲಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಭಾರತೀಯ ಆಟಗಾರನೂ ಹೌದು. ವೈಭವ್ ಬಿಹಾರದ ಸಮಸ್ತಿಪುರ್ ನಿವಾಸಿ. ಪಾಟ್ನಾದ ಜೆನೆಕ್ಸ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಇದೀಗ ಈ ಎಡಗೈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ವಿರುದ್ಧ ಅಂಡರ್​​-19 ಟೆಸ್ಟ್ ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಲು ಸಜ್ಜಾಗಿದ್ದಾರೆ.

ಸೂರ್ಯವಂಶಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರೊಂದಿಗೆ ಆರಂಭಿಕ ಬ್ಯಾಟರ್​ ಆಗಿ ಕ್ರೀಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 30ರಿಂದ ಅಕ್ಟೋಬರ್ 10 ರವರೆಗೆ ಚೆನ್ನೈನಲ್ಲಿ ಪಂದ್ಯಾವಳಿಗಳು ನಡೆಯಲಿವೆ.

ವೈಭವ್ ದಾಖಲೆ:ವೈಭವ್ ಕಳೆದ ವರ್ಷ ನವೆಂಬರ್‌ನಲ್ಲಿ ಭಾರತದ ಅಂಡರ್-19 ಬಿ ತಂಡದಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು ಐದು ಪಂದ್ಯಗಳಲ್ಲಿ 177 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಅಸ್ಸಾಂನಲ್ಲಿ ನಡೆದ ಅಂಡರ್-19 ವಿನೂ ಮಕಾಂದ್ ಟ್ರೋಫಿ ಸ್ಪರ್ಧೆಯಲ್ಲಿ ಬಿಹಾರ ಪರ 360 ರನ್ ಗಳಿಸಿದ್ದರು.

ಸೂರ್ಯವಂಶಿ 13 ವರ್ಷ 5 ತಿಂಗಳ ವಯಸ್ಸಿನಲ್ಲೇ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಇದೀಗ 19 ವರ್ಷದೊಳಗಿನವರ ಭಾರತ ತಂಡ ಸೇರ್ಪಡೆಗೊಂಡಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕಾಗಿ ಭಾರತ ತಂಡ ಪ್ರಕಟಿಸಿದ್ದು ಇದರಲ್ಲಿ ವೈಭವ್ ಸೂರ್ಯವಂಶಿ ಹೆಸರೂ ಸೇರ್ಪಡೆಗೊಂಡಿದೆ.

ಅಂಡರ್​-19 ಭಾರತ ತಂಡ ಹೀಗಿದೆ:ವೈಭವ್ ಸೂರ್ಯವಂಶಿ, ನಿತ್ಯ ಪಾಂಡ್ಯ, ವಿಹಾನ್ ಮಲ್ಹೋತ್ರಾ, ಸೋಹಮ್ ಪಟವರ್ಧನ್ (ನಾಯಕ), ಕಾರ್ತಿಕೇಯ ಕೆ.ಪಿ., ಸಮಿತ್ ದ್ರಾವಿಡ್, ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್), ಹರ್ವಂಶ್ ಸಿಂಗ್ ಪಾಂಗ್ಲಿಯಾ (ವಿಕೆಟ್ ಕೀಪರ್), ಚೇತನ್, ಶರ್ಮಾ, ಸಮರ್ಥ್ ಎನ್, ಆದಿತ್ಯ ರಾವತ್, ನಿಖಿಲ್ ಕುಮಾರ್, ಅನ್ಮೋಲ್ಜಿತ್ ಸಿಂಗ್, ಆದಿತ್ಯ ಸಿಂಗ್, ಮೊಹಮ್ಮದ್ ಅನನ್.

ಇದನ್ನೂ ಓದಿ:ಪ್ರೈವೇಟ್​ ಜೆಟ್​ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು: ಯಾರ ಬಳಿ ಎಷ್ಟು ಬೆಲೆಯ ಜೆಟ್​ ಇವೆ ಗೊತ್ತಾ? - Indian cricketer owns a private jet

ABOUT THE AUTHOR

...view details