ಕರ್ನಾಟಕ

karnataka

ETV Bharat / sports

ಸ್ಮೃತಿ-ಶಫಾಲಿ ಭರ್ಜರಿ ಬ್ಯಾಟಿಂಗ್​; ಪಾಕ್​ ವಿರುದ್ಧ ಭಾರತದ ವನಿತೆಯರಿಗೆ ಭರ್ಜರಿ ಗೆಲುವು - India Grand Victory Over Pakistan - INDIA GRAND VICTORY OVER PAKISTAN

Ind W Vs Pak W Asia Cup 2024: ಮಹಿಳಾ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

WOMENS ASIA CUP 2024  DAMBULLA INTERNATIONAL STADIUM  SHAFALI AND MANDHANA BATTING  INDIA WOMEN OPENERS
ಪಾಕ್​ ಮೇಲೆ ಭಾರತ ಗ್ರ್ಯಾಂಡ್​ ವಿಕ್ಟರಿ (Source: ANI (Left), Getty Images (Right))

By ANI

Published : Jul 20, 2024, 7:34 AM IST

ದಂಬುಲ್ಲಾ (ಶ್ರೀಲಂಕಾ):2024 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ಉತ್ತಮ ಆರಂಭವನ್ನು ಮಾಡಿದೆ. ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಪಾಕಿಸ್ತಾನ ನೀಡಿದ 109 ರನ್‌ಗಳ ಅಲ್ಪ ಗುರಿಯನ್ನು ಟೀಂ ಇಂಡಿಯಾ 14.1 ಓವರ್‌ಗಳಲ್ಲಿ ಬೆನ್ನಟ್ಟಿತು. ಆರಂಭಿಕರಾದ ಸ್ಮೃತಿ ಮಂಧಾನ (45 ರನ್, 31 ಎಸೆತ; 9x4) ಮತ್ತು ಶಫಾಲಿ ವರ್ಮಾ (40 ರನ್, 29 ಎಸೆತ; 6x4, 1x6) ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದರು. ಪಾಕ್ ಬೌಲರ್​​ಗಳ ಪೈಕಿ ಸೈಯದಾ ಅರೂಬ್ ಶಾ 2 ವಿಕೆಟ್ ಪಡೆದರು.

ಸಣ್ಣ ಗುರಿಯನ್ನು ಭೇದಿಸುವಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಕಂಡುಕೊಂಡಿತು. ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಇನಿಂಗ್ಸ್‌ನ ಆರಂಭದಿಂದಲೇ ಅದ್ಭುತವಾಗಿ ಬ್ಯಾಟ್​ ಬೀಸುತ್ತಿದ್ದರು. ಬೌಂಡರಿಗಳನ್ನು ಬಾರಿಸುತ್ತಲೇ ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ, ರಕ್ಷಣಾತ್ಮಕ ಆಟವನ್ನು ಆಡುತ್ತಲೇ ಸಾಗಿದರು. ಈ ಕ್ರಮದಲ್ಲಿ ಅರ್ಧಶತಕದತ್ತ ಸಾಗುತ್ತಿರುವಾಗ ಮಂಧಾನ ವೈಯಕ್ತಿಕ ಸ್ಕೋರ್ 45ರಲ್ಲಿ ಕ್ಯಾಚ್​ ನೀಡಿ ಪೆವಿಲಿಯನ್​ ಹಾದಿ ಹಿಡಿದರು. ಮಂಧಾನ ಮತ್ತು ಶಫಾಲಿ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 85 ರನ್​ಗಳ ಜೊತೆಯಾಟ ನೀಡಿದರು.

ವನ್ ಡೌನ್​ಗೆ ಇಳಿದ ದಯಾಳನ್ ಹೇಮಲತಾ ಜತೆಗೂಡಿ ಶಫಾಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗೆಲುವಿನ ಸಮೀಪಕ್ಕೆ ಬಂದ ನಂತರ 40 ರನ್​ಗಳನ್ನು ಕಲೆ ಹಾಕಿದ್ದ ಶಫಾಲಿ ಔಟಾದರು. ಸ್ವಲ್ಪ ಸಮಯದ ನಂತರ ಹೇಮಲತಾ (14 ರನ್) ಔಟಾದರು. ನಾಯಕಿ ಹರ್ಮನ್‌ಪ್ರೀತ್ ಸಿಂಗ್ಲಾ (5*) ಮತ್ತು ಜೆಮಿಮಾ ರಾಡ್ರಿಗಸ್ (6*) ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 19.2 ಓವರ್‌ಗಳಲ್ಲಿ 108 ರನ್‌ಗಳಿಗೆ ಸರ್ವ ಪತನಗೊಂಡಿತು. ಪೂಜಾ ವಸ್ತ್ರಾಕರ್ ಎರಡನೇ ಓವರ್​ನಲ್ಲಿ ಪಾಕಿಸ್ತಾನಕ್ಕೆ ಶಾಕ್ ನೀಡಿದರು. ಆರಂಭಿಕ ಗುಲ್ ಫಿರೋಜಾ (5) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದಾದ ಬೆನ್ನಲ್ಲೇ ಪೂಜಾ ಮತ್ತೊಬ್ಬ ಆರಂಭಿಕ ಆಟಗಾರ್ತಿ ಮುಬೀನಾ ಅನಿ (11) ಅವರನ್ನು ಔಟ್ ಮಾಡಿದರು. ಅಮೀನ್ (25 ರನ್), ತುಬಾ ಹಸನ್ (22 ರನ್) ಮತ್ತು ಫಾತಿಮಾ ಸನಾ (22 ರನ್) ಉತ್ತಮವಾಗಿ ಆಡಲಿಲ್ಲ. ಉಳಿದ ಎಲ್ಲಾ ಬ್ಯಾಟರ್‌ಗಳು ಕೈ ಎತ್ತಿದರು. ಟೀಂ ಇಂಡಿಯಾದ ಬೌಲರ್‌ಗಳಲ್ಲಿ ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 2 ವಿಕೆಟ್ ಪಡೆದು ಮಿಂಚಿದರು.

ಓದಿ:'ಅದು ನನ್ನ ಕೆಲಸವಲ್ಲ': ವರದಿಗಾರರಿಗೆ ಕೌಂಟರ್​ ಕೊಟ್ಟ ಹರ್ಮನ್ ಪ್ರೀತ್ ಕೌರ್! - Harmanpreet IND VS PAK Match

ABOUT THE AUTHOR

...view details