ನವದೆಹಲಿ: ಟೆಸ್ಟ್ ಚಾಂಪಿಯನ್ಸ್ ಟ್ರೋಫಿ 2025 ಸಮೀಪಿಸುತ್ತಿದ್ದಂತೆ ಒಂದೆಡೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಕಾರಣ ಭಾರತ ಅಲ್ಲಿಗೆ ಪ್ರಯಾಣಿಸುತ್ತದಾ ಎಂಬ ಪ್ರಶ್ನೆಗಳೆದ್ದಿವೆ.
ಪಾಕ್ ವರದಿಗಳ ಪ್ರಕಾರ, ಭಾರತದ ಪ್ರವಾಸ ಖಚಿತವಾಗಿದೆ. ಆದರೆ ಇತರೇ ಮಾಧ್ಯಮ ವರದಿಗಳಂತೆ, ಭಾರತ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲು ಬಯಸಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಅನುಮತಿ ನೀಡಿದರೆ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದರು. ಒಂದು ವೇಳೆ ಭಾರತ, ಪಾಕಿಸ್ತಾನಕ್ಕೆ ತೆರಳಿದರೂ ಭದ್ರತಾ ತುಕಡಿಯೊಂದಿಗೆ ಹೋಗುವುದೇ ಎಂಬುದು ಅಭಿಮಾನಿಗಳ ಕುತೂಹಲ.
ಸಾಮಾನ್ಯವಾಗಿ, ಯಾವುದೇ ಒಂದು ತಂಡ ಹೊರ ದೇಶಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ಭದ್ರತಾ ಸಮಸ್ಯೆಗಳು ಉಂಟಾದಾಗ, ತಂಡದೊಂದಿಗೆ ಭದ್ರತಾ ತುಕಡಿ ಕೂಡ ಪಂದ್ಯ ನಡೆಯುವ ಸ್ಥಳಕ್ಕೆ ತೆರಳುತ್ತವೆ. ಕ್ರಿಕೆಟ್ ಮೈದಾನಗಳು ಮತ್ತು ಭದ್ರತಾ ಸೌಲಭ್ಯಗಳ ಮೇಲ್ವಿಚಾರಣೆ ಮಾಡಿ ಬಳಿಕ ನಿರ್ಣಯ ಕೈಗೊಳ್ಳುತ್ತವೆ. ಈ ವೇಳೆ ಪ್ರವಾಸಿ ಆಟಗಾರರಿಗೆ ಆತಿಥೇಯ ದೇಶದಿಂದ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ಆದಾಗ್ಯೂ, ಯಾವುದೇ ದೇಶ ತನ್ನ ಕ್ರಿಕೆಟ್ ತಂಡದೊಂದಿಗೆ ಸೇನೆ ಅಥವಾ ಯಾವುದೇ ಸಶಸ್ತ್ರ ಪಡೆಗಳನ್ನು ಕಳುಹಿಸುವುದಿಲ್ಲ. ಆದರೆ ಪ್ರವಾಸಕ್ಕೂ ಮೊದಲು ತಪಾಸಣೆಗಾಗಿ ಭದ್ರತಾ ತಂಡವನ್ನು ಕಳುಹಿಸಿ ಪರಿಶೀಲಿಸಬಹುದು.
ಪ್ರವಾಸಕ್ಕೂ ಮುನ್ನ ಭದ್ರತಾ ತಂಡ ಕಳುಹಿಸಿರುವ ದೇಶಗಳು: