ಕೊಲಂಬೊ (ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೀಪಕ್ಷಿಯ ಏಕದಿನ ಸರಣಿಯ (ODI) ಮೊದಲ ಪಂದ್ಯ ಶುಕ್ರವಾರ ಕೊಲಂಬೊ ಮೈದನಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ಗಳನ್ನು ಕಲೆಹಾಕಿತ್ತು. 231 ರನ್ಗಳ ಗುರಿ ಬೆನ್ನಟ್ಟಿದ ಭಾರತ ಪ್ರತ್ಯುತ್ತರವಾಗಿ 47.5 ಓವರ್ಗಳಲ್ಲಿ 230 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಪಂದ್ಯವೂ ಡ್ರಾನಲ್ಲಿ ಕೊನೆಗೊಂಡಿತು. ಬಳಿಕ ಯಾವುದೇ ಸೂಪರ್ ಓವರ್ ನಡೆಸದೇ ಪಂದ್ಯವನ್ನು ಮುಕ್ತಾಯಗೊಳಿಸಲಾಯಿತು.
ಇದನ್ನೂ ಓದಿ:ಸುಳ್ಯದ ಅರಣ್ಯದೊಳಗಿದೆ ಒಂದು ವಿಸ್ಮಯಕಾರಿ ಬಾವಿ: ಏನಿದರ ವಿಶೇಷತೆ? - An amazing well in Sulya
ಸೂಪರ್ ಓವರ್ ಏಕೆ ಆಡಿಸಲಿಲ್ಲ?:ಕ್ರಿಕೆಟ್‌ನಲ್ಲಿ, ಎರಡೂ ತಂಡಗಳ ಸ್ಕೋರ್ ಸಮವಾದಾಗ(ಡ್ರಾ) ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಸೂಪರ್ ಓವರ್ ಆಡಿಸಲಾಗುತ್ತದೆ. ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಸೂಪರ್ ಓವರ್ ನಡೆಸಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ಡ್ರಾನಲ್ಲಿ ಕೊನೆಗೊಳಿಸಲಾಯಿತು.