ಹೈದರಾಬಾದ್: ಭಾರತದಲ್ಲಿ ಕ್ರಿಕೆಟ್ಗೆ ಇರುವ ಕ್ರೇಜ್ ಇತರೆ ಯಾವುದೇ ಕ್ರೀಡೆಗೂ ಇಲ್ಲವೇನೋ ಅನ್ನುವಂತ ವಾತಾವರಣ ಇದೆ. ಈಗಿನ ಯುವಕರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಇದು ವಿಶ್ವದ ಎರಡನೇ ಅತಿ ಜನಪ್ರಿಯ ಆಟವೂ ಹೌದು. ನೆಚ್ಚಿನ ಕ್ರಿಕೆಟಿಗ ಬಳಸುವ ಬ್ಯಾಟ್ ಯಾವುದು ಎಂಬುದನ್ನು ನೋಡಿ ಅಭಿಮಾನಿಗಳು ಅನುಸರಿಸುತ್ತಾರೆ. ಅದೇ ಮಾದರಿಯ ಬ್ಯಾಟ್ಗಳು ಹೇರಳವಾಗಿ ಬಿಕರಿಯಾಗುತ್ತವೆ ಕೂಡ.
ಅಂದಹಾಗೆ ಇಂತಹ ಜಗತ್ಪ್ರಸಿದ್ಧ ಕ್ರೀಡೆಯಲ್ಲಿ ದಾಂಡಿಗರು ಬಳಸುವ ಬ್ಯಾಟ್‌ಗಳನ್ನು ಹೇಗೆ ತಯಾರಿಸುತ್ತಾರೆ. ಯಾವ ಮರದ ಕಟ್ಟಿಗೆಯನ್ನು ಇದಕ್ಕೆ ಬಳಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗನ ಕೈಯಲ್ಲಿರುವ ಬ್ಯಾಟ್‌ನ ಬೆಲೆ ಎಷ್ಟು ಎಂಬುದರ ಕುರಿತ ಇಂಟರೆಸ್ಟಿಂಗ್ ಮಾಹಿತಿ ತಿಳಿಯೋಣ.
ಬ್ಯಾಟ್‌ನ ನಿಯಮ ಮತ್ತು ಇತಿಹಾಸ:ಬ್ಯಾಟ್ ಎಂಬುದು ಕ್ರಿಕೆಟ್ನಲ್ಲಿ ಚೆಂಡನ್ನು ಹೊಡೆಯಲು ಬಳಸುವ ಸಾಧನ. 1624ರಲ್ಲಿ ಮೊದಲ ಬಾರಿಗೆ ಈ ಬ್ಯಾಟ್ ಅನ್ನು ಪರಿಚಯಿಸಲಾಯಿತು. ಬಳಿಕ 1979ರಲ್ಲಿ ಮರದಿಂದ ಮಾಡಿದ ಬ್ಯಾಟ್‌ಗಳನ್ನು ಮಾತ್ರ ಬಳಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಯಿತು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಳಕೆಯಾಗುವ ಬ್ಯಾಟ್ಗಳಿಗೆ ಹಲವು ನಿಯಮಗಳಿವೆ. ಬ್ಯಾಟ್‌ನ ಉದ್ದವು 38 ಇಂಚಿಗಿಂತ (96.5 ಸೆಂ) ಹೆಚ್ಚಿರಬಾರದು. ಅಗಲ 4.25 ಇಂಚು (10.8 ಸೆಂ) ಇರಬೇಕು. ಬ್ಯಾಟ್‌ನ ಹಿಡಿಕೆ(ಹ್ಯಾಂಡಲ್) 25.4 ರಿಂದ 30.5 ಸೆಂಟಿಮೀಟರ್ಗಳಷ್ಟಿರಬೇಕು. ಬಾಟಮ್ ಆಫ್ ದಿ ಬ್ಯಾಟ್ 10.8 ಸೆಂ.ಮೀ ಮತ್ತು ಬ್ಯಾಟ್‌ನ ಮಧ್ಯಭಾಗವು 2.64 ಸೆಂ.ಮೀ ಹಾಗೂ ಎಡ್ಜ್ ಆಫ್ ಬ್ಯಾಟ್ 0.11 ಸೆಂ.ಮೀ ಇರಬೇಕೆಂಬುದು ನಿಯಮ.