ಹೈದರಾಬಾದ್: ಪ್ಯಾರಿಸ್ ಒಲಿಂಪಿಕ್ಸ್ ಆರಂಭಗೊಂಡು ಇಂದಿಗೆ 15 ದಿನಗಳು ಪೂರ್ಣಗೊಂಡಿದ್ದು, ನಾಳೆ ಈ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟು 184 ದೇಶಗಳು ಭಾಗವಹಿಸಿದ್ದವು. ಈ ಪೈಕಿ ಯುಎಸ್ಎ ಅತೀ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗಾದರೆ ಹೆಚ್ಚಿನ ಪದಕ ಗೆದ್ದ ಅಗ್ರ ಐದು ದೇಶಗಳು ಮತ್ತು ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಈ ಸುದ್ಧಿಯಲ್ಲಿ ತಿಳಿಯೋಣ.
ಮೆಡಲ್ ಟ್ಯಾಲಿ - ಟಾಪ್ 5 ರಾಷ್ಟ್ರ್ಖಗಳ ಪದಕ ಪಟ್ಟಿ ಮತ್ತು ಭಾರತದ ಸ್ಥಾನ
ಅಮೆರಿಕ:ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಅಮೆರಿಕ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದುವರೆರೆಗೂ ಒಟ್ಟು 111 ಪದಕಗಳನ್ನು ಗೆದ್ದುಕೊಂಡಿದೆ. ಈ ಪೈಕಿ 33 ಚಿನ್ನ, 39 ಬೆಳ್ಳೆ, 39 ಕಂಚಿನ ಪದಕಗಳು ಸೇರ್ಪಡೆಗೊಂಡಿವೆ. ಅಥ್ಲೇಟಿಕ್ಸ್ನಲ್ಲಿ ಅತೀ ಹೆಚ್ಚು 11 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.
ಚೀನಾ:ಪದಕ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಇದೂವರೆಗೂ ಒಟ್ಟು 83 ಪದಕಗಳನ್ನು ಪಡೆದಿದೆ. ಇದರಲ್ಲಿ 33 ಚಿನ್ನ, 27 ಬೆಳ್ಳಿ, 23 ಕಂಚಿನ ಪದಕಗಳು ಸೇರಿವೆ. ಡೈವಿಂಗ್ ಸ್ಪರ್ಧೆಯೊಂದರಲ್ಲೇ ಚೀನಾ 7 ಚಿನ್ನದ ಪದಕಗಳನ್ನು ಬಾಚಿಕೊಂಡಿದೆ.
ಆಸ್ಟ್ರೇಲಿಯಾ:18 ಚಿನ್ನದ ಪದಕಗಳನ್ನು ಪಡೆದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದು ಒಟ್ಟಾರೆ 48 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬೆಳ್ಳಿ 16, ಮತ್ತು 14 ಕಂಚಿನ ಪದಕಗಳು ಸೇರಿವೆ. ಸ್ವಿಮ್ಮಿಂಗ್ನಲ್ಲಿ ಅತೀ ಹೆಚ್ಚು 7 ಪದಕಗಳನ್ನು ಗೆದ್ದುಕೊಂಡಿದೆ.