ಹೈದರಾಬಾದ್: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದ ಒಳಗೆ ಮತ್ತು ಹೊರಗೆ ಆಗಾಗ್ಗೆ ತಮಾಷೆ ಮಾಡುತ್ತಲೇ ಇರುತ್ತಾರೆ. ತಮ್ಮ ಬ್ಯಾಟ್ ಮಾತ್ರವಲ್ಲದೇ, ಕೆಲವೊಮ್ಮೆ ಕ್ರೇಜಿ ವರ್ತನೆಗಳಿಂದಲೂ ರನ್ ಮಿಷನ್ ಸುದ್ದಿ ಆಗುತ್ತಾರೆ. ಇದೀಗ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಪಾಡ್‌ಕಾಸ್ಟ್ ವೇಳೆ ವಿರಾಟ್ ಡ್ಯಾನ್ಸ್ ಮಾಡಿ ತಮಾಷೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಈಗ ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಪ್ರಮುಖ ಆಟಗಾರರಾಗಿದ್ದಾರೆ. ಕಗಿಸೊ ರಬಾಡ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಇಂದು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನವೇ ವಿರಾಟ್ ಹಾಗೂ ರಬಾಡ ಒಟ್ಟಿಗೆ ಇರುವ ದೃಶೃಗಳು ಗಮನ ಸೆಳೆದಿವೆ.
ಈ ವಿಡಿಯೋ ಪ್ರಕಾರ, 'ವಿಲೋ ಟಾಕ್' ಎಂಬ ಪಾಡ್ಕಾಸ್ಟ್ನಲ್ಲಿ ಕಗಿಸೊ ರಬಾಡ ಮಾತನಾಡುತ್ತಿದ್ದರು. ಈ ವೇಳೆ, ವೇಗಿ ರಬಾಡ ಮುಂದೆ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದಾರೆ. ಏಕಾಏಕಿ ಕೊಹ್ಲಿ ಕಾಣಸಿಕೊಂಡಿದ್ದರಿಂದ ರಬಾಡ ಅಚ್ಚರಿ ಪಟ್ಟಿದ್ದಾರೆ. ಅಲ್ಲದೇ, ಪಾಡ್ಕ್ಯಾಸ್ಟ್ನಲ್ಲಿ ಸಂವಾದ ಮಾಡುತ್ತಲೇ ರಬಾಡ, ವಿರಾಟ್ ಕೊಹ್ಲಿ ಬಂದ್ರು, ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹೇಳುವುದು ಕೇಳಿಬಹುದು. ಇಷ್ಟೇ ಅಲ್ಲ, ಪಾಡ್‌ಕಾಸ್ಟ್ ಸಂದರ್ಶನಕಾರರೊಂದಿಗೂ ವಿರಾಟ್ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ.