ಕರ್ನಾಟಕ

karnataka

ETV Bharat / sports

20 ವರ್ಷಗಳ ವನವಾಸ ಅಂತ್ಯ: ಎಲ್ಲಾ ಅಸ್ತ್ರಗಳನ್ನು ತ್ಯಜಿಸಿದ ಗಾಂಡೀವಧಾರಿ ಅರ್ಜುನನಂತೆ ಕಂಡ ವೀರೇಂದ್ರ ಸೆಹ್ವಾಗ್​ - VIRENDER SEHWAG

Virender Sehwag: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಪಾಲಕ್ಕಾಡ್‌ನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.

FORMER CRICKETER VIRENDER SEHWAG  KERALA SACRED HILLS  VIRENDER SEHWAG VISITS PALAKKAD  VIRENDER SEHWAG NEWS
ಎಲ್ಲಾ ಅಸ್ತ್ರಗಳನ್ನು ತ್ಯಜಿಸಿ ಗಾಂಡೀವ ಅರ್ಜುನನಂತೆ ಕಂಡ ವೀರೇಂದ್ರ ಸೆಹ್ವಾಗ್​ (Photo Credit: Instagram/Virender Sehwag)

By ETV Bharat Sports Team

Published : Jan 11, 2025, 7:13 AM IST

Virender Sehwag:ಬೌಲರ್‌ಗಳಿಗೆ ಭಯದ ಇನ್ನೊಂದು ಹೆಸರಾಗಿದ್ದ ವೀರೇಂದ್ರ ಸೆಹ್ವಾಗ್ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೊಮ್ಮೆ ಅವರು ವೀಕ್ಷಕ ವಿವರಣೆ ಮಾಡುವುದನ್ನು ನಾವು ನೋಡುತ್ತಿದ್ದೆವು . ಅಷ್ಟೇ ಅಲ್ಲ ಅವರು ತರಬೇತಿಯಲ್ಲಿಯೂ ಸಹಾಯ ಹಸ್ತ ಚಾಚಿದ್ದುಂಟು. ಉತ್ಸಾಹಭರಿತ ವರ್ತನೆಗೆ ಹೆಸರುವಾಸಿಯಾದ ವೀರೂ ಮೊದಲ ಬಾರಿಗೆ ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 'ನಜಾಫ್‌ಗಢದ ನವಾಬ್' ಎಂದೇ ಪ್ರಸಿದ್ಧರಾದ ವೀರೇಂದ್ರ ಸೆಹ್ವಾಗ್ ಈಗ ಎಲ್ಲ ಅಸ್ತ್ರಗಳನ್ನು ತ್ಯಜಿಸಿದ ಅರ್ಜನನಂತೆ ಕಾಣಿಸಿಕೊಂಡಿದ್ದಾರೆ.

ದೇವಸ್ಥಾನದಲ್ಲಿ ವಿಶೇಷ ಪೂಜೆ: ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಕೇರಳ ಪ್ರವಾಸದಲ್ಲಿದ್ದರು. ಕೇರಳದ ಮಧ್ಯಭಾಗದಲ್ಲಿರುವ ಪಾಲಕ್ಕಾಡ್ ಒಂದು ಸಣ್ಣ ಬೆಟ್ಟದ ಪಟ್ಟಣ. ಸುಂದರವಾದ ಕಣಿವೆಗಳು ಮತ್ತು ಚಾರಣ ಹಾದಿಗಳಿಗೆ ಹೆಸರುವಾಸಿಯಾದ ಪಾಲಕ್ಕಾಡ್ ವಿಶ್ವಪ್ರಸಿದ್ಧ ದೇವಾಲಯವನ್ನೂ ಹೊಂದಿದೆ. ಕೆಲ ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ ಪಾಲಕ್ಕಾಡ್ ಜಿಲ್ಲೆಯ ಕವಿಲ್ಪಾಡ್‌ನಲ್ಲಿರುವ ಪುಲಿಕ್ಕಲ್ ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ದೇವಾಲಯಕ್ಕೆ ಭೇಟಿ ನೀಡಿದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್​ ಆಗ್ತಿವೆ.

ಹಣೆಯ ಮೇಲೆ ಭಂಡಾರ: ಈ ಸಂದರ್ಭದಲ್ಲಿ ವೀರೂ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡರು. ಸೆಹ್ವಾಗ್​ ಅವರು ’ಮುಂಡು’ ಧರಿಸಿ (ಕೇರಳದ ಸಾಂಪ್ರದಾಯಿಕ ಉಡುಗೆ), ಹಣೆಯ ಮೇಲೆ ಕುಂಕುಮ ಹಚ್ಚಿಕೊಂಡಿದ್ದರು. ದೇವಾಲಯದಲ್ಲಿ ಭಾರತೀಯ ಆಟಗಾರನಿಗೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಅವರು ಮಾನವೇಂದ್ರ ವರ್ಮ ಯೋಗತಿರಿಪಾದರಿಂದ ಪ್ರಸಾದ ಸ್ವೀಕರಿಸಿದರು. ಕ್ರಿಕೆಟ್​ ಪಂದ್ಯಗಳನ್ನು ಹೊರತುಪಡಿಸಿ ತಾನು ಎಂದಿಗೂ ಕೇರಳಕ್ಕೆ ಬಂದಿಲ್ಲ. ಇಲ್ಲಿನ ಪರಿಸರ ತುಂಬಾ ಸುಂದರವಾಗಿದೆ ಎಂದು ಸೆಹ್ವಾಗ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದು ಸೆಹ್ವಾಗ್‌ಗೆ ಅದ್ಭುತ ಅನುಭವವಾಗಿದೆ ಎಂದ್ರೆ ತಪ್ಪಾಗಲ್ಲ.

20 ವರ್ಷಗಳ ಬಳಿಕ ಕೇರಳಕ್ಕೆ ಭೇಟಿ: ಸೆಹ್ವಾಗ್ 2005 ರಲ್ಲಿ ಪಾಕಿಸ್ತಾನ ವಿರುದ್ಧ ಮತ್ತು 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಿಗಾಗಿ ಕೊಚ್ಚಿಗೆ ಬಂದಿದ್ದರು. ಸದ್ಯ ಈ ಭೇಟಿ ಸಂದರ್ಭದಲ್ಲಿ ಭಾರತೀಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಮಾಧ್ಯಮಗಳೊಂದಿಗೆ ಸಂವಹನ ನಡೆಸಿದರು. ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

ಪಾಲಕ್ಕಾಡ್​ನ ವಿಶೇಷತೆವೇನು?:ಪಾಲಕ್ಕಾಡ್ ತನ್ನ ಗ್ರಾಮೀಣ ಹಿನ್ನೆಲೆ ಮತ್ತು ವಿಶಾಲವಾದ ಭತ್ತದ ಗದ್ದೆಗಳಿಂದಾಗಿ ಕೇರಳದ ಉಳಿದ ಭಾಗಗಳಿಗಿಂತ ಭಿನ್ನವಾಗಿದೆ. ಪಾಲಕ್ಕಾಡ್‌ನ ಬೆಟ್ಟಗುಡ್ಡಗಳ ಭೂದೃಶ್ಯವು ನೋಡಲು ಅದ್ಭುತವಾಗಿದೆ. ಕೇರಳದ ಅಕ್ಕಿ ಉತ್ಪಾದನೆಯಲ್ಲಿ ಪಾಲಕ್ಕಾಡ್ ಪ್ರಮುಖ ಪಾತ್ರ ವಹಿಸುವುದರಿಂದ ಇದನ್ನು 'ಕೇರಳದ ಅಕ್ಕಿ ಪಾತ್ರೆ' ಎಂದೂ ಕರೆಯುತ್ತಾರೆ.

ಓದಿ:ವಿಡಿಯೋ: ವೃಂದಾವನ ಆಶ್ರಮಕ್ಕೆ ಮಕ್ಕಳೊಂದಿಗೆ ಭೇಟಿ ಕೊಟ್ಟ ವಿರಾಟ್​ ಕೊಹ್ಲಿ ಅನುಷ್ಕಾ ಶರ್ಮಾ

ABOUT THE AUTHOR

...view details