ಕರ್ನಾಟಕ

karnataka

ETV Bharat / sports

ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ - VIRAT KOHLI IPL

ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (IANS)

By ETV Bharat Sports Team

Published : Nov 3, 2024, 11:15 AM IST

Updated : Nov 3, 2024, 11:26 AM IST

Virat Kohli Rcb: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​​ಸಿಬಿ) ಅಭಿಮಾನಿಗಳಿಗೆ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಹೌದು, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ ಬಳಿಕ ಈ ಸ್ವರೂಪಕ್ಕೆ ವಿರಾಟ್​ ವಿದಾಯ ಘೋಷಿಸಿದ್ದರು. ಇದರ ಬೆನ್ನಲ್ಲೇ ದೇಶಿಲೀಗ್​ ಆದ ಐಪಿಎಲ್​ನಲ್ಲಿ ಎಷ್ಟು ದಿನಗಳ ಕಾಲ ಮುಂದುವರೆಯುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ಆದರೆ, ಇತ್ತೀಚೆಗೆ ಈ ಚರ್ಚೆಗೆ ಸ್ವತಃ ಕೊಹ್ಲಿ ಅವರೇ ತೆರೆ ಎಳೆದಿದ್ದಾರೆ ಎನ್ನಬಹುದು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 20 ವರ್ಷಗಳ ಕಾಲ ಆಡುವ ಆಸೆ ಇದೆ ಎಂದಿರುವ ವಿರಾಟ್, ಇನ್ನೂ ಕನಿಷ್ಠ ಮೂರು ವರ್ಷಗಳ ಕಾಲ ಐಪಿಎಲ್​ನಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನ ಸಂದರ್ಭದಲ್ಲಿ ಆರ್‌ಸಿಬಿ 21 ಕೋಟಿ ರೂ.ಗೆ ಕೊಹ್ಲಿಯನ್ನು ತಂಡಕ್ಕೆ ರಿಟೇನ್​ ಮಾಡಿಕೊಂಡಿದ್ದು ಗೊತ್ತೇ ಇದೆ.

ವಿರಾಟ್​ ಕೊಹ್ಲಿ (IANS)

ಪ್ರತೀ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುವುದರಿಂದ ಕೊಹ್ಲಿ 2027ರವರೆಗೂ ಆರ್‌ಸಿಬಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ. 2008ರಲ್ಲಿ ಐಪಿಎಲ್​ ಲೀಗ್‌ನ ಆರಂಭದಿಂದಲೂ ಆರ್​ಸಿಬಿ ತಂಡದಲ್ಲಿರುವ ಕೊಹ್ಲಿ 2027ರ ಋತುವಿನೊಂದಿಗೆ 20 ವರ್ಷಗಳನ್ನು ಪೂರೈಸಲಿದ್ದಾರೆ.

ಈ ಬಗ್ಗೆ ಕೊಹ್ಲಿ ಕೂಡ ಪ್ರತಿಕ್ರಿಯಿಸಿದ್ದು, "ಮುಂದಿನ ಮೂರು ವರ್ಷಗಳ ಪೂರ್ಣಗೊಂಡ ಬಳಿಕ ನಾನು ಆರ್​ಸಿಬಿ ಪರ 20 ವರ್ಷಗಳನ್ನು ಪೂರ್ಣಗೊಳಿಸಿದಂತಾಗುತ್ತದೆ. ಇದೊಂದು ಅದ್ಭುತ ಕ್ಷಣ. ಐಪಿಎಲ್​ನ ಸುದೀರ್ಘ ಜರ್ನಿಯಲ್ಲಿ ಒಂದೇ ತಂಡದಲ್ಲಿ ಆಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆರ್‌ಸಿಬಿ ತಂಡದೊಂದಿಗೆ ವಿಶೇಷ ಬಾಂಧವ್ಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ."

ವಿರಾಟ್​ ಕೊಹ್ಲಿ (IANS)

"ನಾನು ಆರ್‌ಸಿಬಿ ಬಿಟ್ಟು ಬೇರೆ ಯಾವುದೇ ತಂಡದಲ್ಲಿ ಆಡುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇದೀಗ ಮತ್ತೊಮ್ಮ ನನ್ನ ನೆಚ್ಚಿನ ತಂಡದಲ್ಲಿರುವುದಕ್ಕೆ ಖುಷಿಯಾಗುತ್ತಿದೆ. ಈ ಬಾರಿ ಹರಾಜಿನಲ್ಲಿ ಬಲಿಷ್ಠ ಜೊತೆಗೆ ಹೊಸ ತಂಡ ಕಟ್ಟುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದ್ದೇನೆ. ಮುಂದಿನ ಮೂರು ವರ್ಷಗಳಲ್ಲಿ ಖಂಡಿತವಾಗಿ ಪ್ರಶಸ್ತಿ ಗೆಲ್ಲುವುದೇ ನಮ್ಮ ಗುರಿ" ಎಂದು ಆರ್‌ಸಿಬಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ತಿಳಿಸಿದ್ದಾರೆ.

ಕೊಹ್ಲಿ ಐಪಿಎಲ್​ ದಾಖಲೆ:ಕೊಹ್ಲಿ ಇದುವರೆಗೂ 252 ಪಂದ್ಯಗಳಲ್ಲಿ 244 ಇನ್ನಿಂಗ್​ಗಳಲ್ಲಿ ಆಡಿದ್ದು 8004 ರನ್​ ಪೂರೆಸಿದ್ದಾರೆ. ಇದರಲ್ಲಿ 8 ಶತಕ ಮತ್ತು 55 ಅರ್ಧಶತಕ ಸೇರಿವೆ. 113 ಹೈಸ್ಕೋರ್​ ಆಗಿದೆ.

ಇದನ್ನೂ ಓದಿ:ಐಪಿಎಲ್ ರಿಟೇನ್ ಲಿಸ್ಟ್: ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಂಡಿದೆ?

Last Updated : Nov 3, 2024, 11:26 AM IST

ABOUT THE AUTHOR

...view details