Virat kohli Breaks Dravid Record:ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಗಬ್ಬಾ ಮೈದಾನದಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಕಾಂಗರೂ ಪಡೆ ಬೃಹತ್ ಸ್ಕೋರ್ ಕಲೆ ಹಾಕಿದೆ. ಟ್ರಾವಿಸ್ ಹೆಡ್ (152), ಸ್ಟೀವ್ ಸ್ಮಿತ್ (100), ಅಲೆಕ್ಸ್ ಕ್ಯಾರಿ (70) ಬ್ಯಾಟಿಂಗ್ ನೆರವಿನಿಂದ 445 ರನ್ ಗಳಿಸಿದೆ.
ಇದಕ್ಕುತ್ತರವಾಗಿ, ಭಾರತ ಆಸೀಸ್ ಬೌಲಿಂಗ್ ದಾಳಿಗೆ ಸಿಲುಕಿ 44 ರನ್ಗಳಿಗೆ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡಿದೆ. ಆರಂಭಿಕ ಬ್ಯಾಟರ್ ಜೈಸ್ವಾಲ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕೇವಲ 4 ರನ್ಗಳಿಸಿ ಸ್ಟಾರ್ಕ್ ಎಸೆತದಲ್ಲಿ ಕ್ಯಾಚ್ಔಟ್ ಆಗಿ ಪೆವಿಲಿಯನ್ ಸೇರಿದರು. ಉಳಿದಂತೆ ಶುಭಮನ್ ಗಿಲ್ (1), ರಿಷಭ್ ಪಂತ್ (9), ವಿರಾಟ್ ಕೊಹ್ಲಿ (3) ಕೂಡ ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದ್ದಾರೆ. ಆದರೆ, ಕೊಹ್ಲಿ 3 ರನ್ ಗಳಿಸಿ ಔಟಾದರೂ ದ್ರಾವಿಡ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.
ದ್ರಾವಿಡ್ ದಾಖಲೆ ಬ್ರೇಕ್:ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಟಿ20, ಏಕದಿನ ಎಲ್ಲಾ ಮೂರು ಸ್ವರೂಪಗಳು ಸೇರಿ ಕೊಹ್ಲಿ ಅವರ 100ನೇ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ತಮ್ಮ ಹೆಸರಿಗೆ ಮತ್ತೊಂದು ದಾಖಲೆ ಸೇರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ದ್ರಾವಿಡ್ ಅವರನ್ನೂ ಹಿಂದಿಕ್ಕಿದ್ದಾರೆ.