ಹೈದರಾಬಾದ್ : ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿರುಷ್ಕಾ ದಂಪತಿ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಜೂನಿಯರ್ ಕೊಹ್ಲಿಗೆ ವಿಭಿನ್ನವಾಗಿ "ಅಕಾಯ್" ಎಂದು ಹೆಸರಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಪೋಸ್ಟ್ನಲ್ಲಿ " ಕಳೆದ ಫೆಬ್ರವರಿ 15 ರಂದು ಬಹಳ ಸಂತೋಷದಿಂದ ನಮ್ಮ ಎರಡನೇ ಮಗುವನ್ನು ಬರಮಾಡಿಕೊಂಡೆವು, ವಮಿಕಾ ಈಗ ಅಕ್ಕ ಆಗಿದ್ದಾಳೆ. ನಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದೇವೆ. ಈ ವೇಳೆ ನಿಮ್ಮ ಹಾರೈಕೆ, ಆಶೀರ್ವಾದ ನಮಗೆ ಬೇಕು. ಜೊತೆಗೆ ದಯವಿಟ್ಟು ನಮ್ಮ ಪ್ರೈವೆಸಿಯನ್ನು ಗೌರವಿಸಿ ಎಂದು ಹೇಳಿದ್ದಾರೆ. "ಅಕಾಯ್" ಎಂದರೆ ಹುಣ್ಣಿಮೆ ಚಂದ್ರ ಎಂದರ್ಥ.