ಕರ್ನಾಟಕ

karnataka

ETV Bharat / sports

'ನನ್ನ ಮಗ ಭಾರತ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ': ವಿನೋದ್ ಕಾಂಬ್ಳಿ - VINOD KAMBLI EXCLUSIVE INTERVIEW

ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ ಅವರು ತಮ್ಮ ಆರೋಗ್ಯ, ಭವಿಷ್ಯದ ಯೋಜನೆಗಳು ಮತ್ತು ಸಚಿನ್​ ತೆಂಡೂಲ್ಕರ್​ ಕುರಿತು ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು.

VINOD KAMBLI  VINOD KAMBLI INTERVIEW  VINOD KAMBLI ON SACHIN TENDULKAR  VINOD KAMBLI HEALTH UPDATE
ವಿನೋದ್​ ಕಾಂಬ್ಳಿ (ETV Bharat)

By ETV Bharat Sports Team

Published : Dec 31, 2024, 7:54 PM IST

ಥಾಣೆ(ಮಹಾರಾಷ್ಟ್ರ):ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಖಾಸಗಿ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಂಡಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ.

ಈ ಮಧ್ಯೆ ಈಟಿವಿ ಭಾರತ್‌ ವರದಿಗಾರ ಅಮೃತ್ ಸುತಾರ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಹಲವಾರು ವಿಷಯಗಳ ಕುರಿತು ಮನದಾಳ ಹಂಚಿಕೊಂಡರು.

ಮೊದಲಿಗೆ ತಮಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಆಕೃತಿ ಆಸ್ಪತ್ರೆಯ ನಿರ್ದೇಶಕ ಶೈಲೇಶ್ ಠಾಕೂರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

"ಈಗ ನಾನು ಚೇತರಿಸಿಕೊಂಡಿದ್ದೇನೆ. ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತೇನೆ. ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಿದ ಠಾಕೂರ್ ಅವರು ನನ್ನ ಪಾಲಿಗೆ ದೇವರಿದ್ದಂತೆ" ಎಂದರು.

ಶೀಘ್ರದಲ್ಲೇ ಮೈದಾನಕ್ಕೆ ಮರಳುವೆ:ಬಳಿಕತನ್ನ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡುತ್ತಾ, "ನಾನು ನನ್ನ ವೃತ್ತಿಜೀವನದಲ್ಲಿ ಒಂಬತ್ತು ಬಾರಿ ಕ್ರಿಕೆಟ್​ಗೆ ಪುನರಾಗಮನ ಮಾಡಿದ್ದೇನೆ. ಈ ಬಾರಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಕೋಚ್ ಆಗಿ ಮೈದಾನಕ್ಕೆ ಮರಳುವೆ" ಎಂದರು.

ಸಚಿನ್ ತೆಂಡೂಲ್ಕರ್ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದ ಪ್ರಶ್ನೆಗೆ, "ನಾನು ಸಚಿನ್ ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಅದಕ್ಕೆ ಅವರ ಮೇಲಿನ ಪ್ರೀತಿಗಾಗಿ ನನ್ನ ಕೈ ಮೇಲೆ ಸಚಿನ್ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದೇನೆ. ಜೊತೆಗೆ ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಇದಕ್ಕಾಗಿ ನನ್ನ ಹೆಂಡತಿಯ ಹೆಸರನ್ನೂ ಹಚ್ಚೆ ಹಾಕಿಸಿಕೊಂಡಿದ್ದೇನೆ. ಅವರ ಸಹಕಾರ ಮತ್ತು ಬೆಂಬಲದಿಂದಲೇ ನಾನು ಇಲ್ಲಿದ್ದೇನೆ" ಎಂದು ಹೇಳಿದರು.

ಎಡಗೈ ಬ್ಯಾಟರ್ ಆಗಿ ತನ್ನ ಹೆಜ್ಜೆಗಳನ್ನು ಅನುಸರಿಸುತ್ತಿರುವ ಮಗನ ಕುರಿತು ಮಾತನಾಡಿದ ಕಾಂಬ್ಳಿ, "ನನ್ನ ಮಗ ಕೂಡ ತರಬೇತಿ ಪ್ರಾರಂಭಿಸಿದ್ದಾನೆ. ಅವನ ಬ್ಯಾಟಿಂಗ್ ಶೈಲಿ ನನ್ನಂತೆಯೇ ಇದೆ. ಮುಂದೊಂದು ದಿನ ಆತ ಭಾರತವನ್ನು ಪ್ರತಿನಿಧಿಸುತ್ತಾನೆ ಎಂಬ ವಿಶ್ವಾಸವಿದೆ" ಎಂದು ಹೇಳಿದರು.

ಸಂಕಷ್ಟದ ಸಂದರ್ಭದಲ್ಲಿ ಕಾಂಬ್ಳಿ ಅವರಿಗೆ ಸಹಾಯಹಸ್ತ ಚಾಚಿರುವ ಶ್ರೀಕಾಂತ್ ಶಿಂಧೆ ಫೌಂಡೇಶನ್, 5 ಲಕ್ಷ ರೂ. ನೆರವು ನೀಡಿದೆ. ಮತ್ತೊಂದೆಡೆ, ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ 20 ಲಕ್ಷ ರೂ. ನೆರವು ಒದಗಿಸಿದ್ದಾರೆ.

ಇದನ್ನೂ ಓದಿ:11 ಸಿಕ್ಸರ್​, 15 ಬೌಂಡರಿ, 150ಕ್ಕೂ ಹೆಚ್ಚು ರನ್​: ವಿಶ್ವದಾಖಲೆ ಬರೆದ IPL ಅನ್​ಸೋಲ್ಡ್​ ಆಟಗಾರ!

ABOUT THE AUTHOR

...view details