ಕರ್ನಾಟಕ

karnataka

ETV Bharat / sports

ಭಾರತಕ್ಕೆ ದೊಡ್ಡ ಆಘಾತ: ಚಿನ್ನದ ನಿರೀಕ್ಷೆಯಲ್ಲಿದ್ದ ​ವಿನೇಶ್​ ಫೋಗಟ್ ಪ್ಯಾರಿಸ್​ ಒಲಿಂಪಿಕ್ಸ್​ನಿಂದಲೇ ಅನರ್ಹ - Vinesh Phogat is disqualified - VINESH PHOGAT IS DISQUALIFIED

Paris Olympics ​ ಮಹಿಳಾ ಕುಸ್ತಿ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ತೋರಿ ಫೈನಲ್​​​ ಪ್ರವೇಶಿಸಿದ್ದ ವಿನೇಶ್​​ ಫೋಗಟ್ ಅವರನ್ನು ಒಲಿಂಪಿಕ್ಸ್​ನಿಂದ ಅನರ್ಹಗೊಳಿಸಲಾಗಿದೆ.

ವಿನೇಶ್​ ಫೋಗಟ್ ಫೈನಲ್​ ಪಂದ್ಯದಿಂದ​ ಅನರ್ಹ
ವಿನೇಶ್​ ಫೋಗಟ್ ಫೈನಲ್​ ಪಂದ್ಯದಿಂದ​ ಅನರ್ಹ (Etv Bharat)

By ETV Bharat Sports Team

Published : Aug 7, 2024, 12:21 PM IST

Updated : Aug 7, 2024, 6:23 PM IST

ಪ್ಯಾರಿಸ್​ (ಫ್ರಾನ್ಸ್​):ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳಾ 50 ಕೆಜಿ ಕುಸ್ತಿ ಈವೆಂಟ್‌ನ ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಕುಸ್ತಿಪಟು ವಿನೇಶ್ ಫೋಗಟ್​ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಅಧಿಕ ತೂಕದ ಕಾರಣ ವಿನೇಶ್​ ಅವರನ್ನು ಫೈನಲ್‌ ಪಂದ್ಯಕ್ಕೂ ಮೊದಲೇ ಅನರ್ಹಗೊಳಿಸಲಾಗಿದೆ.

ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಫೋಗಟ್​​ ಕ್ಯೂಬಾದ ಲೋಪೆಜ್ ಗುಜ್ಮನ್ ಅವರನ್ನು 5-0 ಅಂತರದಿಂದ ಮಣಿಸಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಅನರ್ಹಗೊಳಿಸಿರುವ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ದೃಢಪಡಿಸಿದೆ. ಅಧಿಕ ತೂಕದ ಕಾರಣ ಫೋಗಟ್ ಅವರನ್ನು ಒಲಿಂಪಿಕ್ಸ್​ ಮಹಿಳಾ ವಿಭಾಗದ 50 ಕೆಜಿ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಐಒಎ, "ವಿನೇಶ್ ಫೋಗಟ್ ಮಹಿಳಾ ಕುಸ್ತಿಯ 50 ಕೆಜಿ ವಿಭಾಗದಿಂದ ಅನರ್ಹಗೊಂಡಿರುವುದಕ್ಕೆ ಭಾರತೀಯ ತಂಡಕ್ಕೆ ದುಃಖವಾಗಿದೆ. ಭಾರತೀಯ ತಂಡವು ರಾತ್ರಿಯಿಡೀ ಎಷ್ಟೇ ಪ್ರಯತ್ನಿಸಿದರೂ, ಇಂದು ಬೆಳಗ್ಗೆ ಅವರ ತೂಕವು 50 ಕೆಜಿಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.

ಮಂಗಳವಾರ ಅತ್ಯುತ್ತಮ ಪ್ರದರ್ಶನ ತೋರಿದ್ದ ಫೋಗಟ್​:ಮಂಗಳವಾರ ಪಂದ್ಯದಲ್ಲಿ ವಿನೇಶ್ ಅತ್ಯುತ್ತಮ ಪ್ರದರ್ಶನ ತೋರಿ ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ್ದರು. ಕ್ಯೂಬಾದ ಲೋಪೆಜ್ ಗುಜ್ಮನ್ ವಿರುದ್ಧದ ಈ ಪಂದ್ಯದ ಕೊನೆಯ ಮೂರು ನಿಮಿಷಗಳಲ್ಲಿ ಕ್ಯೂಬಾದ ಕುಸ್ತಿಪಟುವಿನ ಮೇಲೆ ಡಬಲ್ ಲೆಗ್ ಅಟ್ಯಾಕ್ ಮಾಡಿ ನಾಲ್ಕು ಅಂಕ ಗಳಿಸಿ ಗೆಲುವು ಸಾಧಿಸಿದ್ದರು. ಸೆಮಿಫೈನಲ್‌ಗೂ ಮುನ್ನ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಲಿವಾಚ್ ಉಕ್ಸಾನಾ ಅವರನ್ನು 7-5 ಅಂತರದಿಂದ ಮಣಿಸಿದ್ದರು.

ಸೋಲಿಲ್ಲದ ಸರದಾರೆ ಮಣ್ಣುಮುಕ್ಕಿಸಿದ್ದ ವಿನೇಶ್​:ಇದಕ್ಕೂ ಮೊದಲ ಪಂದ್ಯದಲ್ಲಿ ಜಪಾನಿನ ಸೋಲಿಲ್ಲದ ಸರದಾರೆ ಎನಿಸಿಕೊಂಡಿದ್ದ 3 ಬಾರಿಯ ವಿಶ್ವ ಚಾಂಪಿಯನ್ ಹಾಗೂ ಟೋಕಿಯೋ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತೆ ಯುಯಿ ಸುಸಾಕಿ ವಿರುದ್ಧ 3-2 ಅಂತರದಿಂದ ಗೆಲುವು ಸಾಧಿಸಿದ್ದರು. ಈ ಮೂಲಕ ಅವರು ಬಂಗಾರದ ಕನಸನ್ನು ಭಾರತೀಯರಲ್ಲಿ ಬಿತ್ತಿದ್ದರು.

ಆದರೆ ದೇಹ ತೂಕ 100 ಗ್ರಾಂ ಹೆಚ್ಚಾಗಿದ್ದರಿಂದ ಇದೀಗ ಅವರು ಪ್ಯಾರಿಸ್ ಒಲಿಂಪಿಕ್ಸ್​​ನಿಂದಲೇ ಅನರ್ಹಗೊಂಡಿದ್ದಾರೆ.

ಇದನ್ನೂ ಓದಿ:ಸೆಮೀಸ್​​ನಲ್ಲಿ ಜರ್ಮನಿ ವಿರುದ್ಧ ಭಾರತಕ್ಕೆ ಸೋಲು: 44 ವರ್ಷಗಳ ಬಳಿಕವೂ ಈಡೇರದ ಚಿನ್ನದ ಕನಸು - Paris Olympics 2024

Last Updated : Aug 7, 2024, 6:23 PM IST

ABOUT THE AUTHOR

...view details