USA Breaks Team India Record: ಒಮಾನ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅಮೆರಿಕ ಇತಿಹಾಸ ಸೃಷ್ಟಿಸಿದೆ. ಟೀಂ ಇಂಡಿಯಾ ಹೆಸರಲ್ಲಿದ್ದ ದೊಡ್ಡ ದಾಖಲೆಯೊಂದನ್ನು ಮುರಿದು ಹಾಕಿದೆ.
ಮಂಗಳವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2ರ 54ನೇ ಪಂದ್ಯದಲ್ಲಿ ಅಮೆರಿಕ ಮತ್ತು ಒಮಾನ್ ತಂಡಗಳು ಮುಖಾಮುಖಿ ಆಗಿದ್ದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಅಮೆರಿಕ, 35.3 ಓವರ್ಗಳಿಗೆ 122 ರನ್ ಗಳಿಸಿ ಆಲೌಟ್ ಆಯಿತು. ತಂಡದ ಪರ ಮಿಲಿಂದ್ ಕುಮಾರ್ ಅಜೇಯ 47 ರನ್ ಕಲೆಹಾಕಿ ಹೈಸ್ಕೋರರ್ ಎನಿಸಿಕೊಂಡರು.
ಒಮಾನ್ ಪರ ಶಕೀಲ್ ಅಹ್ಮದ್ 3 ವಿಕೆಟ್ ಪಡೆದರೆ, ಸಮಯ್ ಶ್ರೀವಾಸ್ತವ ಮತ್ತು ಸಿದ್ಧಾರ್ಥ್ ಬುಕ್ಕಪಟ್ಟಣಂ ತಲಾ ಎರಡು ವಿಕೆಟ್ ಉರುಳಿಸಿದರು.
ಅಮೆರಿಕ ನೀಡಿದ್ದ ಅಲ್ಪಮೊತ್ತ ಬೆನ್ನತ್ತಿದ ಒಮಾನ್ ಕಳಪೆ ಆರಂಭ ಪಡೆಯಿತು. ಹಮ್ಮದ್ ಮಿರ್ಜಾ (29) ಬಿಟ್ಟರೆ ಉಳಿದ ಬ್ಯಾಟರ್‌ಗಳು ಕನಿಷ್ಠ ಎರಡಂಕಿ ಸ್ಕೋರ್ ಗಳಿಸಲೂ ಸಾಧ್ಯವಾಗದೆ ಪೆವಿಲಿಯನ್ ದಾರಿ ಹಿಡಿದರು. ಇದರಿಂದಾಗಿ ಓಮನ್ 25.3 ಓವರ್‌ಗಳಲ್ಲಿ ಕೇವಲ 65 ರನ್‌ಗಳಿಗೆ ಸರ್ವಪತನ ಕಂಡಿತು. ಅಂತಿಮವಾಗಿ ಅಮೆರಿಕ 57 ರನ್ಗಳಿಂದ ಜಯಭೇರಿ ಬಾರಿಸಿತು. ಇದರೊಂದಿಗೆ ಕಡಿಮೆ ಮೊತ್ತದ ಸ್ಕೋರ್ ಡಿಫೆನ್ಸ್ ಮಾಡಿದ ತಂಡವಾಗಿ ಭಾರತದ 40 ವರ್ಷದ ವಿಶ್ವ ದಾಖಲೆ ಮುರಿಯಿತು.