ಕರ್ನಾಟಕ

karnataka

ETV Bharat / sports

58 ಎಸೆತದಲ್ಲಿ ಶತಕ 'ವೈಭವ'! ಆಸ್ಟ್ರೇಲಿಯನ್ನರ ಬೆವರಿಳಿಸಿದ 13 ವರ್ಷದ ಭಾರತೀಯ ಬ್ಯಾಟರ್​! - Under 19 Test Cricket - UNDER 19 TEST CRICKET

ಅಂಡರ್​ 19 ಟೆಸ್ಟ್​ನಲ್ಲಿ ಭಾರತೀಯ ಯುವ ಬ್ಯಾಟರ್​ 58 ಎಸೆತಗಳಲ್ಲಿ ​ಶತಕ ಸಿಡಿಸಿ ಸಂಭ್ರಮಿಸಿದರು.

ವೈಭವ್​ ಸೂರ್ಯವಂಶಿ
ವೈಭವ್​ ಸೂರ್ಯವಂಶಿ (Instagram Photo)

By ETV Bharat Sports Team

Published : Oct 1, 2024, 5:55 PM IST

ನವದೆಹಲಿ: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವೆ ನಾಲ್ಕು ದಿನಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿ ವೇಗದ ಶತಕ ಸಿಡಿಸಿದರು.

13 ವರ್ಷದ ವೈಭವ್ ಸೂರ್ಯವಂಶಿ ಕೇವಲ 58 ಎಸೆತಗಳಲ್ಲಿ ಶತಕದಾಟವಾಡಿದ್ದಾರೆ. ಇವರ ಆಕರ್ಷಕ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಒಟ್ಟಾರೆ 62 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿ ಔಟಾದರು.

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು ಭಾರತೀಯರು 293 ರನ್‌ಗಳಿಗೆ ಕಟ್ಟಿ ಹಾಕಿದರು. ಇದಕ್ಕುತ್ತರವಾಗಿ ಭಾರತ 296 ರನ್ ಗಳಿಸಿ 3 ರನ್​ಗಳ ಮುನ್ನಡೆ ಸಾಧಿಸಿತು. ಆರಂಭಿಕ ಆಟಗಾರ ವೈಭವ್ ಬ್ಯಾಟಿಂಗ್​ ನೆರವಿನಿಂದ ಭಾರತ ಟೆಸ್ಟ್​ನಲ್ಲಿ ಎರಡನೇ ವೇಗದ ಶತಕ ಸಿಡಿಸಿ ದಾಖಲೆ ಬರೆಯಿತು.

ನಿನ್ನೆ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ, ಭಾರತ ಹಿರಿಯರ ತಂಡ ವೇಗದ 100 ರನ್ ಗಳಿಸಿತ್ತು. ಕಿರಿಯರ ತಂಡ ಕೂಡ ಅವರ ದಾಖಲೆ ಬೆನ್ನತ್ತಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಕೇವಲ 14 ಓವರ್‌ಗಳಲ್ಲಿ 7.36 ರನ್‌ರೇಟ್‌ನೊಂದಿಗೆ 103 ರನ್ ಕಲೆಹಾಕಿದ್ದಾರೆ. ವಿಹಾನ್ ಮಲ್ಹೋತ್ರಾ 37 ಎಸೆತಗಳಲ್ಲಿ 21 ರನ್ ಗಳಿಸಿ ಅಜೇಯರಾಗುಳಿದರೆ, ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿ ದಿನದಾಟ ಅಂತ್ಯಗೊಳಿಸಿದ್ದರು.

ಇದೇ ಮಾದರಿಯಲ್ಲಿ ಎರಡನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಸೂರ್ಯವಂಶಿ, ಶತಕ ಗಳಿಸಲು ಸಮಯ ವ್ಯರ್ಥ ಮಾಡಲಿಲ್ಲ. 11 ಎಸೆತಗಳಲ್ಲಿ 19 ರನ್ ಗಳಿಸಿ 58 ಎಸೆತಗಳಲ್ಲಿ ಈ ಸಾಧನೆ ಮಾಡಿದರು.

2005ರಲ್ಲಿ ಶ್ರೀಲಂಕಾ ವಿರುದ್ಧ ಮೊಯಿನ್ ಅಲಿ 56 ಎಸೆತಗಳಲ್ಲಿ 100 ರನ್​ಗಳಿಸಿದ್ದರು. ಇದೀಗ ವೈಭವ್​ ಸೂರ್ಯವಂಶಿ ವೇಗದ ಶತಕ ಸಿಡಿಸಿದ ಯುವ ಟೆಸ್ಟ್ ಆಟಗಾರನಾಗಿದ್ದಾರೆ. ಇದು ಅವರ ಎರಡನೇ ವೇಗದ ಶತಕವಾಗಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ 2ನೇ ಟೆಸ್ಟ್​ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ: ತವರಿನಲ್ಲಿ ಇದು ಸತತ 18ನೇ ಸರಣಿ ಗೆಲುವು! - India Beat Bangladesh

ABOUT THE AUTHOR

...view details