ನವದೆಹಲಿ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಕಳೆದ ಜುಲೈ ತಿಂಗಳಿನಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿದ್ದರು. ಈ ಬಗ್ಗೆ ಸ್ವತಃ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಸ್ಟಾರ್ ಜೋಡಿಯ ವಿಚ್ಛೇದನದ ಸುದ್ದಿ ತಿಳಿಯುತ್ತಿದ್ದಂತೆ ಹಲವು ಊಹಾಪೋಹಗಳು ಹರಿದಾಡಿದ್ದವು. ಆದರೀಗ ಇಬ್ಬರೂ ಬೇರೆ ಆಗುವುದಕ್ಕೆ ನಿಜವಾದ ಕಾರಣ ಬಯಲಾಗಿದೆ.
ಟೈಮ್ಸ್ ನೌ ವರದಿ ಪ್ರಕಾರ, ನತಾಶಾ ಅವರ ನಿಕಟ ಮೂಲವೊಂದು ಇಬ್ಬರ ವಿಚ್ಛೇದನಕ್ಕೆ ಕಾರಣ ಏನೆಂದು ತಿಳಿಸಿದೆ. ಇಬ್ಬರೂ ದೂರವಾಗಲು ಅವರಲ್ಲಿನ ವಿಭಿನ್ನ ವ್ಯಕ್ತಿತ್ವವೇ ಕಾರಣ ಎಂದು ಹೇಳಲಾಗಿದೆ. ವರದಿ ಹೇಳುವಂತೆ, ಹಾರ್ದಿಕ್ ಪಾಂಡ್ಯ ದುರಹಂಕಾರದ ವ್ಯಕ್ತಿತ್ವದವರಾಗಿದ್ದರು ಎಂದು ನತಾಶಾ ಅವರ ಆಪ್ತ ಮೂಲಗಳು ಆರೋಪಿಸಿವೆ. ಆದರೆ, ನತಾಶಾಗೆ ಅದನ್ನು ಸಹಿಸಲಾಗಲಿಲ್ಲ. ಹಾರ್ದಿಕ್ ವ್ಯಕ್ತಿತ್ವವನ್ನು ಬದಲಾಯಿಸಲು ನತಾಶಾ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮುಂದುವರೆದಿತ್ತು. ದಿನ ಕಳೆದಂತೆ ಅದು ಹೆಚ್ಚಾಗತೊಡಗಿತ್ತು ಎಂದು ವರದಿಯಾಗಿದೆ.