ನವದೆಹಲಿ:ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯಯುತವಾಗಿರಲು ವಿವಿಧ ಬಗೆಯ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಜೊತೆಗೆ ದೇಹವನ್ನು ದಂಡಿಸಲು ಜಿಮ್ನಲ್ಲಿ ವ್ಯಾಯಮವನ್ನು ಮಾಡುತ್ತಾರೆ. ಹೀಗೆ ಮಾಡುವುದರಿಂದ ದೇಹವೂ ಫಿಟ್ ಆಗಿರುವುದರ ಜೊತೆಗೆ ಯಾವುದೇ ಕಾಯಿಲೆಗೆ ತುತ್ತಾಗದೇ ಆರೋಗ್ಯಯುತವಾಗಿರುತ್ತೇವೆ ಎಂದು ದೀರ್ಘ ಕಾಲದವರೆಗೆ ಜಿಮ್‌ನಲ್ಲಿಯೇ ಇದ್ದು ದೇಹವನ್ನು ಸದೃಢಗೊಳಿಸಲು ಶ್ರಮಿಸುತ್ತಾರೆ. ಆದ್ರೆ ಜಗತ್ಪ್ರಸಿದ್ಧ ಬಾಡಿಬಿಲ್ಡರ್ ಎಂದೇ ಖ್ಯಾತಿ ಪಡೆದಿರುವ ಇಲ್ಯಾ ಗೊಲೆಮ್ ಯೆಫಿಮ್ಚಿಕ್ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. 36 ವರ್ಷದ ಈ ಬಾಡಿ ಬಿಲ್ಡರ್ ಕಟುಮಸ್ತಾದ ದೇಹದೊಂದಿಗೆ ಫಿಟ್ ಆಗಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, 36 ವರ್ಷದ ಬೆಲರೂಸಿಯನ್ ಬಾಡಿಬಿಲ್ಡರ್ ಸೆಪ್ಟೆಂಬರ್ 6 ರಂದು ಹೃದಯಾಘಾತಕ್ಕೆ ತುತ್ತಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ನಂತರ ಕೋಮಾಕ್ಕೆ ಹೋದರು. ಇದಾದ ಬಳಿಕ ಬಿಲ್ಡರ್ ಸಾವನ್ನಪ್ಪಿರುವುದಾಗಿ ವೈದ್ಯ ಘೋಷಿಸಿದರು. ಈ ಕ್ರೀಡಾಪಟು ತನ್ನ 25-ಇಂಚಿನ ಬೈಸೆಪ್‌ಗಳಿಗಾಗಿ ದಿನಕ್ಕೆ 16,500 ಕ್ಯಾಲೊರಿಗಳನ್ನು ಸೇವಿಸುತ್ತಿದ್ದರು. ಅದಕ್ಕಾಗಿ ಅವರು ಹೆಚ್ಚಿನ ಆಹಾರವನ್ನು ಸೇವಿಸುತ್ತಿದ್ದರು. 6-ಅಡಿ, 340-ಪೌಂಡ್ ಮೈಕಟ್ಟು ಕಾಪಾಡಿಕೊಳ್ಳಲು ದಿನಕ್ಕೆ ಏಳು ಬಾರಿ ವಿವಿಧ ಬಗೆಯ ಆಹಾರವನ್ನು ಸೇವಿಸುತ್ತಿದ್ದರು. 154 ಕೆಜಿ. ದೇಹದ ತೂಕವನ್ನು ಹೊಂದಿದ್ದ ಇವರನ್ನು ಬಾಹುಬಲಿ ಬಾಡಿಬಿಲ್ಡರ್ ಎಂದು ಕರೆಯಲಾಗುತ್ತಿತ್ತು.
ದಿನಕ್ಕೆ ಏಳು ಬಾರಿ ಆಹಾರ ಸೇವನೆ ಮಾಡಿದರೂ ದೇಹದಲ್ಲಿ ಎಲ್ಲಿಯೂ ಕೊಬ್ಬು ಹೊಂದಿರಲಿಲ್ಲ ಆದ್ರೆ ಹಠಾಟ್ ಹೃದಯಾಘಾತ ಸಂಭವಿಸಿದ್ದು ಅಚ್ಚರಿ ಮೂಡಿಸಿದೆ. ಪ್ರಸ್ತುತ ಜೀವನಶೈಲಿ ಮತ್ತು ತನ್ನನ್ನು ತಾನು ಸದೃಢವಾಗಿಡಲು ನಿಯಮಿತವಾಗಿ ಮಾಡುವ ಅತಿಯಾದ ವ್ಯಾಯಾಮವು ದೇಹಕ್ಕೆ ಸಾಕಷ್ಟು ವ್ಯತ್ಯಾಸವನ್ನುಂಟುಮಾಡುತ್ತದೆ. ಈ ಜೀವನಶೈಲಿಯು ಯುವಕರು ಮತ್ತು ಎಲ್ಲಾ ವಯಸ್ಸಿನ ಜನರ ಹೃದಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಅವರು ಹೃದ್ರೋಗದಿಂದ ಬಳಲುತ್ತಿದ್ದಾರೆ.