ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ: ಮೀಸಲು ದಿನವೂ ಮಳೆ ಬಂದರೆ ಯಾರಾಗಲಿದ್ದಾರೆ ಚಾಂಪಿಯನ್​? - weather report

ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಇಂದು ಶೇ.75 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೀಸಲು ದಿನವೂ ಮಳೆಯಾದರೆ ಯಾರನ್ನು ವಿಜೇತರನ್ನಾಗಿ ಘೋಷಿಸಲಾಗುತ್ತದೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ
ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ (AP Photo)

By ETV Bharat Karnataka Team

Published : Jun 29, 2024, 11:56 AM IST

ಬೆಂಗಳೂರು: ಟಿ20 ವಿಶ್ವಕಪ್‌ 2024ರ ಅಂತಿಮ ಹಣಾಹಣಿಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ. ಉಭಯ ತಂಡಗಳು ಇಂದು ಬ್ರಿಡ್ಜ್​ಟೌನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.

ಆದರೆ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಭೀತಿ ಎದುರಾಗಿದೆ. ಟೂರ್ನಿಯ ಕೆಲ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದು, ಇಂದಿನ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಉಷ್ಣವಲಯದ ಚಂಡಮಾರುತದ ಪರಿಣಾಮದಿಂದ ಇಂದು ಬಾರ್ಬಡೋಸ್‌ ದ್ವೀಪದಲ್ಲಿ ದಿನವಿಡೀ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅದಾಗ್ಯೂ ಸಹ ಪಂದ್ಯದ ವೇಳೆಗೆ ಮಳೆ ಬಾಧಿಸದೆಯೂ ಇರಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಇಂದು ಮಳೆಯಿಂದಾಗಿ ಪಂದ್ಯ ರದ್ದಾದರೆ ಮುಂದಿನ ಆಯ್ಕೆಗಳೇನು ಎಂಬ ವಿವರ ಹೀಗಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಿರಲಿದೆ. ಪಂದ್ಯಕ್ಕೆ ಮಳೆ ಬಾಧಿಸಿದರೆ 190 ನಿಮಿಷಗಳ ಹೆಚ್ಚುವರಿ ಸಮಯ ನಿಗದಿಯಾಗಿರುತ್ತದೆ. ಹೆಚ್ಚುವರಿ ಸಮಯ ವಿಸ್ತರಣೆಯ ಬಳಿಕವೂ ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾದರೆ (ಉಭಯ ತಂಡಗಳು‌ ಕನಿಷ್ಠ 10 ಓವರ್‌ಗಳು ಆಡಲು‌ ಸಾಧ್ಯವಾಗದೇ) ಭಾನುವಾರ ಪಂದ್ಯಕ್ಕೆ ಮೀಸಲು ದಿನವಾಗಲಿದೆ. ಇಂದಿನ ಪಂದ್ಯ ಎಲ್ಲಿ ನಿಂತಿರುತ್ತದೆಯೋ ಅಲ್ಲಿಂದಲೇ ಮೀಸಲು ದಿನದ ಪಂದ್ಯಾಟ ಮುಂದುವರೆಯುತ್ತದೆ. ಒಂದು ವೇಳೆ ಮೀಸಲು ದಿನವೂ ಸಹ ಮಳೆಯಿಂದಾಗಿ ಸಂಪೂರ್ಣ ಪಂದ್ಯ ರದ್ದಾದರೆ ಎರಡೂ ತಂಡಗಳನ್ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಅಕ್ಯುವೆದರ್ ವರದಿಯ ಪ್ರಕಾರ, ಬಾರ್ಬಡೋಸ್‌ನಲ್ಲಿ ಪಂದ್ಯದ ದಿನ ಗುಡುಗು ಸಹಿತ ಶೇ 75ರಷ್ಟು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ಆರಂಭದ ವೇಳೆ ಶೇ.30ರಷ್ಟು ಮಳೆ ಬೀಳಲಿದ್ದು, 1 ಗಂಟೆಗೆ ಮತ್ತೆ ಶೇ.50ರಷ್ಟು ಮಳೆಯಾಗಲಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ:ಅಜೇಯವಾಗಿ ಫೈನಲ್​​ ಪ್ರವೇಶಿಸಿರುವ ಭಾರತ Vs ದಕ್ಷಿಣ ಆಫ್ರಿಕಾ ನಡುವೆ ಹೈವೋಲ್ಟೇಜ್​ ಕದನ; ಯಾರ ಪಾಲಾಗಲಿದೆ 9ನೇ ಆವೃತ್ತಿಯ ವಿಶ್ವಕಿರೀಟ? - India Vs South Africa Final Match

ABOUT THE AUTHOR

...view details